ಮೈಸೂರು

ಭಾರೀ ಮಳೆಗೆ ಮೈಸೂರು ನಂಜನಗೂಡು ಊಟಿ ರಸ್ತೆ ರೈಲ್ವೆ ಬ್ರಿಡ್ಜ್ ಬಳಿ ಮಣ್ಣು ಕುಸಿತ: ಶಾಸಕ ಜಿ.ಟಿ. ದೇವೇಗೌಡ ಭೇಟಿ; ಪರಿಶೀಲನೆ

ಮೈಸೂರು, ನ.8:-  ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದಿರುವ ಭಾರೀ ಮಳೆಯಿಂದಾಗಿ ಮೈಸೂರು ನಂಜನಗೂಡು ಊಟಿ ರಸ್ತೆ ಕಡಕೋಳ ಬಳಿ ಇರುವ ರೈಲ್ವೆ ಮೇಲ್ಸೇತುವೆ ಹಾಗೂ ವರುಣ ನಾಲೆಯ ಕೆಳಭಾಗದ ಅಕ್ಕಪಕ್ಕದಲ್ಲಿ ಮುಂದಿನ ಏರಿ ಕುಸಿದು ರಸ್ತೆಗೆ ಬಿದ್ದುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಈ ವಿಚಾರವನ್ನು ತಿಳಿದ ಚಾಮುಂಡೇಶ್ವರಿ ಕ್ಷೇತ್ರ ಶಾಸಕರಾದ ಜಿ.ಟಿ ದೇವೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಸದಸ್ಯ ಶ್ರೀಕಂಠ ತೊಂಡೆ ಗೌಡ ರವರಿಂದ ಮಾಹಿತಿ ಪಡೆದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಮಾತನಾಡಿ ಸರಿಪಡಿಸಲು ಕಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಶ್ರೀಕಂಠ ತೊಂಡೆಗೌಡರವರು ಈ ರಸ್ತೆ ಮೇಲೆ ಪ್ರೌಢಶಾಲೆ ಇದ್ದು ಪಕ್ಕದಲ್ಲಿ ರಸ್ತೆಯಿದೆ. ರಸ್ತೆಗೆ ತಡೆಗೋಡೆ ನಿರ್ಮಿಸಿದ್ದು ಈ ತಡೆಗೋಡೆ ಸಹ ಮಳೆಯಿಂದ ಕುಸಿದು ಬೀಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: