ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೇಕೆದಾಟು ಆರಂಭಿಸುವಂತೆ ಕಾಂಗ್ರೆಸ್ ಒತ್ತಾಯವಿದೆಯೇ ಹೊರತು ತಂತ್ರವಿಲ್ಲ : ಸಿದ್ದರಾಮಯ್ಯ

ಜಿಟಿಡಿ ಜೊತೆ ವೇದಿಕೆ ಹಂಚಿಕೆಗೆ ವಿಶೇಷವೇನೂ ಇಲ್ಲ

ಮೈಸೂರು,ನ.9:- ಮೇಕೆದಾಟು  ಆರಂಭಿಸುವಂತೆ ಕಾಂಗ್ರೆಸ್ ಒತ್ತಾಯವಿದೆಯೇ ಹೊರತು ನಮ್ಮದು ಯಾವ ತಂತ್ರವೂ ಇಲ್ಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿಂದು  ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮೇಕೆದಾಟು  ಡಿಪಿಆರ್ ಮಾಡಲು ತಡ ಮಾಡಿದ್ದರು ಈಗ ಪಾದಯಾತ್ರೆ ಮಾಡುವುದಕ್ಕೆ ಅರ್ಥವಿದೆಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳಿದ್ದಾರೆಂಬ ಮಾಧ್ಯಮದ  ಪ್ರಶ್ನೆಗೆ ಪ್ರತಿಕ್ರಿಯಿಸಿ  ನಮ್ಮ ಕಾಲದಲ್ಲೇ ಡಿಪಿಆರ್ ಆಗಿದೆ. ಅವರೂ ಕೂಡ  ಹಿಂದೆ ನೀರಾವರಿ ಮಂತ್ರಿಯಾಗಿದ್ದರು.  ನಮ್ಮ ಕಾಲದಲ್ಲೇ ಡಿಪಿಆರ್ ಆಗಿದೆ. ಆರು ಸಾವಿರ ಚಿಲ್ಲರೆ ಕೋಟಿಗೆ ಆಗಿದೆ ಪಕ್ಕಾ ಮಾಹಿತಿ ಇಲ್ಲ. ಕೇಂದ್ರ ಸರ್ಕಾರಕ್ಕೆ ಕಳಿಸಿದ್ವಿ, ಕ್ಲಿಯರೆನ್ಸ್ ಬಂದಿಲ್ಲ. ಕೆಲಸ  ಪ್ರಾರಂಭಿಸಲು ಯಾವುದೇ ಅಡ್ಡಿ ಅಡೆ ತಡೆ ಇಲ್ಲ. ನ್ಯಾಯಾಲಯದ ಆದೇಶ ಕೂಡ ಕ್ಲಿಯರ್ ಆಗಿದೆ. ತಮಿಳುನಾಡಿನವರು ಸುಮ್ಮನೆ ರಾಜಕೀಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಸರ್ಕಾರ ಬಂದು ಆಗಲೇ ಎರಡೂ ಕಾಲು ವರ್ಷವಾಯಿತು. ಶೀಘ್ರ ಕೆಲಸ ಪ್ರಾರಂಭ ಮಾಡಿ ಅಂತ ಪಾದಯಾತ್ರೆ ಅಷ್ಟೇ ಎಂದರು. ಕಾಂಗ್ರೆಸ್ ಒತ್ತಡದ ತಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಒತ್ತಡ ಹಾಕಿದರೆ ಮಾತ್ರ ಅಲ್ಲವೇನ್ರಿ ಇವರು ಮಾಡೋದು, ತಂತ್ರ ಅಲ್ಲ ಬೊಮ್ಮಾಯಿಯವರು ಏನಾದರೂ ಹೇಳುತ್ತಾರೆ. ಕಾಂಗ್ರೆಸ್ ನವರನ್ನು ಬಿಟ್ಟು ಬಿಡಿ ಹೋಗಲಿ. ಮಾಡಲಿ ಅವರೇ ಎಂದರು.

ಕೆಲಸ ಪ್ರಾರಂಭ ಮಾಡಿ, ಕೆಲಸ  ವಿಳಂಬವಾಗುತ್ತಿದೆ. ಅನಗತ್ಯವಾಗಿ ತಡಮಾಡುತ್ತಿದ್ದಾರೆ. ಯಾಕೆ ಅವರು ಪ್ರಾರಂಭ ಮಾಡುತ್ತಿಲ್ಲ. ಪ್ರಾರಂಭ ಮಾಡಲು ತೊಂದರೆ ಏನು, ಪ್ರಾರಂಭಿಸಿ ಅಂತ  ಹೇಳೋದು ನಾವು.   ಸುಪ್ರೀಂ ಕೋರ್ಟ್ ನ ಯಾವುದೇ ವಿರುದ್ಧ ಆದೇಶವಿಲ್ಲ. ಪ್ರಾರಂಭ ಮಾಡಬೇಕು ಮಾಡಿಲ್ಲ, ತಮಿಳ್ನಾಡಿನವರು ವಿರೋಧ ಮಾಡಲು ಅವರಿಗೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಸುಪ್ರೀಂಕೋರ್ಟ್ ಬೆಂಬಲವಿಲ್ಲ, ಪ್ರಾರಂಭಿಸದೇ ವಿಳಂಬಮಾಡುತ್ತಿದ್ದಾರೆ. ಕೂಡಲೇ ಕೆಲಸ ಮಾಡಿ ಅಂತ ಒತ್ತಾಯಕ್ಕೋಸ್ಕರ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರೊಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ವಿರೋಧ ಪಕ್ಷದವರು ಆಡಳಿತ ಪಕ್ಷದವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲವಾ?  ಬರಬಾರದು ಅಂತ ಇದೆಯಾ? ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಟ್ ಕಾಯಿನ್ ಕುರಿತು ಕಾಂಗ್ರೆಸ್ ಬಳಿ ಸಾಕ್ಷಿ ಕೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ , ತನಿಖಾ ಏಜೆನ್ಸಿ ಯಾರ ಹತ್ತಿರ ಇದೇರಿ, ಮಾಡಲಿ ಅವರು, ಸಾಕ್ಷಿ ಸಂದರ್ಭ ಅವಕಾಶ ಬಂದಾಗ ಕೊಡೋಣ, ಅದು ಬೇರೆ ವಿಚಾರ.  ಸರಿಯಾಗಿ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ಅದರಲ್ಲಿ ಆಡಳಿತದವರಿರಲಿ, ಯಾರಾದರೂ ಇರಲಿ. ತಪ್ಪು ಮಾಡಿದವರೆ ಶಿಕ್ಷೆ ಆಗಬೇಕು. ಶ್ರೀಕೃಷ್ಣ ಅನ್ನೋ ವ್ಯಕ್ತಿನ ಬಂಧಿಸಿದ್ದಾರೆ. ತನಿಖೆ ಮಾಡಿದ್ದಾರೆ. ಚಾರ್ಜ್ ಶೀಟ್ ಹಾಕಿದ್ದಾರೆ. ಅವನು ಬಿಟ್ ಕಾಯಿನ್ ಬಗ್ಗೆ ಮಾತಾಡಿದ್ದಾನೆ. ಬಿಟ್ ಕಾಯಿನ್ ಯಾರೋ ತಗೊಂಡಿದ್ದಾರೆಂದು ಸುದ್ದಿ ಇದೆ. ಅದು ಜನರಿಗೆ ಗೊತ್ತಾಗಬೇಕಲ್ಲ.  ಅದರ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಸೇರಿದಂತೆ ಹಲವರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: