ಕರ್ನಾಟಕಪ್ರಮುಖ ಸುದ್ದಿ

ಕನ್ನಡ ರಾಜ್ಯೋತ್ಸವ ಮತ್ತು  ಶಂಕರ್ ನಾಗ್ ಜನ್ಮದಿನ ಆಚರಣೆ

ರಾಜ್ಯ( ಬೆಂಗಳೂರು),ನ.9:- 66ನೇ ಕನ್ನಡ ರಾಜ್ಯೋತ್ಸವ ಮತ್ತು  ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನು  ಜೆಪಿನಗರ 7ನೇ ಹಂತದ ಕೊತನೂರು ಮುಖ್ಯ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್ಮೆಂಟ್ ಮುಂಭಾಗ ಡಾ. ಸರ್. ಎಂ ವಿಶ್ವೇಶ್ವರಯ್ಯ ಆಟೋ ನಿಲ್ದಾಣ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಯುಕ್ತಾಶ್ರಯದಲ್ಲಿ ಆಚರಿಸಲಾಯಿತು.

ದಿ‌ ನ್ಯಾಷನಲ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಹೆಚ್.ಸಿ ಕೃಷ್ಣ ಅವರು ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಎನ್.ಸಿ.ಬಿ ಅಧ್ಯಕ್ಷರಾದ ಹೆಚ್.ಸಿ ಕೃಷ್ಣ ಅವರು ಮಾತನಾಡಿ ಕರ್ನಾಟದಲ್ಲಿ ಸ್ವಾಭಿಮಾನಿ ಕನ್ನಡಿಗನೇ ಸಾರ್ವಭೌಮ, ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನ ಹೆಚ್ಚಾಗಿ ಬಳಸಿ ಬೆಳಸುವಲ್ಲಿ ಆಟೋ ಚಾಲಕರ ಪಾತ್ರವು ಸಹ ಮಹತ್ವವಾದದ್ದು, ಕನ್ನಡ ಭಾಷೆ, ನೆಲ, ಜಲ ವಿಚಾರವಾಗಿ ಧಕ್ಕೆ ಬಂದಾಗ ರಸ್ತೆಗೆ ಇಳಿದು ಕರ್ನಾಟಕದ ಪರವಾಗಿ ಮೊದಲು ಪ್ರತಿಭಟಿಸುವುದೇ ಆಟೋ ಚಾಲಕರು, ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನು ರಾಜ್ಯ ಸರ್ಕಾರ ಕಾರ್ಮಿಕರ ಇಲಾಖೆ “ಆಟೋ ಚಾಲಕರ ದಿನಾಚರಣೆ” ಎಂದು ಅಧಿಕೃತವಾಗಿ ಆಚರಿಸಲು ಮುಂದಾಗಬೇಕು. ಆರ್ಥಿಕವಾಗಿ ಹಿಂದುಳಿದ ಆಟೋ ಚಾಲಕರ ಕ್ಷೇಮಾಭಿವೃದ್ಧಿಗಾಗಿ ವಿಮೆ ಮತ್ತು ಸಾಲ ಸೌಲಭ್ಯಗಳನ್ನು ಸರ್ಕಾರಿ ಯೋಜನೆಗಳನ್ನಾಗಿ ಜಾರಿಗೆ ತಂದು ಕಟ್ಟಕಡೆಯ ಸ್ವಾಭಿಮಾನಿ ಆಟೋ ಚಾಲಕನಿಗೆ ತಲುಪವಂತಾಗಬೇಕು ಎಂದರು.

ಈ ಸಂದರ್ಭ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಡಾ. ಕೋದಂಡರಾಮ್, ಭರತ್, ಮೂರ್ತಿ, ಜೆಡಿಎಸ್ ಮುಖಂಡ ಬಾಲಚಂದ್ರ, ಅನಿಲ್, ಅಜಯ್ ಶಾಸ್ತ್ರಿ, ಏಳನೀರು ಚಂದ್ರು, ಜಿಮ್ ಮಂಜು, ವೆಂಕಟೇಶ್, ಯೋಗರಾಜ್, ಚಕ್ರವರ್ತಿ, ಸರ್‌. ಎಂವಿ   ಆಟೋ ಚಾಲಕರ ಸಂಘದ ಕೃಷ್ಣಪ್ಪ, ಪುಟ್ಟಯ್ಯ, ರಾಜು, ವೆಂಕಟೇಶ್, ಶಿವು ಇನ್ನಿತರರು ಇದ್ದರು‌. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: