ಸುದ್ದಿ ಸಂಕ್ಷಿಪ್ತ

ಮಹಾನಗರ ಪಾಲಿಕೆ ನಿರ್ಲಕ್ಷ್ಯ : ಕೈ ತಪ್ಪಿದ ಸ್ವಚ್ಚ ನಗರಿ ಪ್ರಥಮ ಸ್ಥಾನ

ಮೈಸೂರು.ಮೇ 5 : ದೇಶದ ಪ್ರಪ್ರಥಮ ಸ್ವಚ್ಚ ನಗರಿ ಮೈಸೂರು ಪ್ರಸಕ್ತ ಸಾಲಿನಲ್ಲಿ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದಕ್ಕೆ ಮಹಾನಗರ ಪಾಲಿಕೆ ಕಾರ್ಯವೈಖರಿ ಹಾಗೂ ರೇಸ್ ಕ್ಲಬ್ ನಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಕುದುರೆ ಲಾಯಗಳು ಮತ್ತು ಕೊಟ್ಟಿಗೆಗಳು ಕಾರಣ ಎಂದು ಕರ್ನಾಟಕ ಕನ್ನಡ ವೇದಿಕೆ ಸಂಘನೆ ರಾಜ್ಯಾಧ್ಯಕ್ಷ ಸುರೇಶ್ ಬಾಬು ಆರೋಪಿಸಿದ್ದಾರೆ.

ರೇಸ್ ಕ್ಲಬ್ ನಲ್ಲಿ ಸತ್ತ ಕುದುರೆಗಳನ್ನು ಸೂಕ್ತವಾಗಿ ಸಂಸ್ಕಾರ ಮಾಡದೆ ಇರುವುದರಿಂದ ಕೊಳೆತ ಪ್ರಾಣಿಗಳಿಂದ ಕ್ರಿಮಿಗಳು ಹರಡಿ ಹಕ್ಕಿ ಜ್ವರಕ್ಕೂ ಕಾರಣವಾಗಿತ್ತು. ಮೈಸೂರು ಬಯಲು ಶೌಚಾಲಯದಿಂದ ಮುಕ್ತವಾಗಿಲ್ಲ ಇವೆನ್ನೆಲ್ಲ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸಮೀಕ್ಷೆಯ ವೇಳೆ ಪರಿಗಣಿಸಿದ್ದು ಅಂಕ ಗಳಿಕೆಯಲ್ಲಿ ಹಿಂದಾಗಿದೆ ಎಂದು ತಿಳಿಸಿರುವ ಅವರು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣವೇ ರೇಸ್ ಕ್ಲಬ್ ಅಕ್ರಮವನ್ನು ಸರಿಪಡಿಸಿ ಮುಂದಿನ ವರ್ಷದಲ್ಲಿ ಪ್ರಥಮ ಸ್ಥಾನಪಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: