ಮೈಸೂರು

ಪಡುವಾರಹಳ್ಳಿ ಸ್ನೇಹ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು,ನ.10:-  ಪಡುವಾರಹಳ್ಳಿ ಸ್ನೇಹ ಬಳಗದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ರಸ್ತೆಯ ನಾಮಫಲಕದ ಬಳಿ ಇಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಸಕರಾದ ಎಲ್ ನಾಗೇಂದ್ರ ಅವರು ಭುವನೇಶ್ವರಿ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕನ್ನಡ ನಿತ್ಯೋತ್ಸವವಾಗುವ ಮೂಲಕ ನಾಡು ನುಡಿಗೆ ಶ್ರಮಿಸುತ್ತಿರುವ ಕನ್ನಡಿಗರು ಪರಭಾಷಿಕರು ಕನ್ನಡ ಮಾತನಾಡುವ ರೀತಿಯಲ್ಲಿ ಮನಗೆಲ್ಲಬೇಕು. ಆ ಮೂಲಕ ಕನ್ನಡದ ಕೆಲಸವನ್ನು ದಿನನಿತ್ಯವೂ ಮಾಡುವ ಕೆಲಸದಲ್ಲಿ ಯುವಕರು ತೊಡಗಿಸಿಕೊಂಡು ಕನ್ನಡ ಭಾಷೆಯ ಕಟ್ಟುವಲ್ಲಿ ನಿರಂತರವಾಗಿ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷರಾದ ಕೆ ಉಮಾಶಂಕರ್ ,ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ, ನಗರಪಾಲಿಕೆ ಸದಸ್ಯರಾದ ನಮ್ರತಾ ರಮೇಶ್,ಎಂ.ಚಿಕ್ಕವೆಂಕಟು,ಮಾಜಿ ಸದಸ್ಯ ಸಿ ಶ್ರೀರಾಂ,ದಿ.ಮೈ.ಕೋ ಆ.ಬ್ಯಾಂಕ್ ನಿರ್ದೇಶಕರಾದ ಜೆ.ಯೋಗೇಶ್,ಎಸ್.ಅರವಿಂದ,ಹೆಚ್.ಹರೀಶ್ ಕುಮಾರ್,ಟೆನ್ನಿಸ್ ಗೋಪಿ,ಒಕ್ಕಲಿಗರ ಸಂಘದ ನಿರ್ದೇಶಕರಾದ ಎ.ರವಿ,ಗುರುರಾಜ್,ಸಿ.ಮರಿಸ್ವಾಮಿ,ದಿ.ಸಿಟಿ.ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ.ಶಿವು,ಎಂ.ಎನ್.ಸ್ವರೂಪ್, ಸುರೇಂದ್ರ, ಪೈಲ್ವಾನ್ ಚಂದ್ರು, ನಾಗರಾಜ್,ಯೋಗ ನರಸಿಂಹೇಗೌಡ,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
,ಡಾ.ಎಂ.ಆರ್.ಲೋಕೇಶ್,ಗುತ್ತಿಗೆದಾರ ಅರುಣ್,ಆಟೋ ಮಂಜು,ಶಾಂತಿ,ಚುಬ್ಬಿ,ಜಯಣ್ಣ,ಕೇಬಲ್ ಕಿಟ್ಟಿ ,ಭೂಮಿಗಿರಿ ಪ್ರಕಾಶನದ ಎನ್ ಬೆಟ್ಟೇಗೌಡ,ಜಿತೇಂದ್ರ ಮತ್ತಿತರರು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: