ಕರ್ನಾಟಕಪ್ರಮುಖ ಸುದ್ದಿಮನರಂಜನೆ

ನಟ ರಮೇಶ್ ಅರವಿಂದ್ ಅಭಿನಯದ “100” ಚಿತ್ರ ನವೆಂಬರ್ 19ರಂದು ತೆರೆಗೆ

ರಾಜ್ಯ (ಹುಬ್ಬಳ್ಳಿ),ನ.11 :- ನಟ ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ‘100’ ಚಿತ್ರವು ನವೆಂಬರ್ 19 ರಂದು  ತೆರೆ ಕಾಣಲಿದೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಚಿತ್ರದ ಕುರಿತು ಮಾತನಾಡಿರುವ ರಮೇಶ್ ಅರವಿಂದ್, ಸಿನಿಮಾವನ್ನು ನಾನು ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿದ್ದೇನೆ. ನನ್ನ ಜೊತೆ ನಾಯಕಿಯಾಗಿ ರಚಿತಾ ರಾಮ್ ಇದ್ದಾರೆ.  ಪೂರ್ಣ, ಶೋಭ್ ರಾಜ್, ರಾಜು ತಾಳಿಕೋಟಿ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ ಎಂದು ಹೇಳಿದರು.

ಈ ಸಿನಿಮಾದ ಕಥೆ  ಒಂದು ಕುಟುಂಬದ ಮಧ್ಯೆ ನಡೆಯುತ್ತದೆ. ಕುಟುಂಬದ ಸದಸ್ಯರೆಲ್ಲ ಕುಳಿತು ನೋಡುವ ಸಿನಿಮಾ. ಎಲ್ಲರಿಗೂ ಇಷ್ಟವಾಗುವ ಅಂಶಗಳಿವೆ. ಯಾಕಂದರೆ ಈ ಸಿನಿಮಾ ಇರುವುದೇ ಮೊಬೈಲ್ ಬಗ್ಗೆ ಎಂದು ಒಂದು ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ.

ಚಿತ್ರಕ್ಕೆ ಒಳ್ಳೆಯ ತಾಂತ್ರಿಕ ತಂಡ ನನಗೆ ಸಿಕ್ಕಿದೆ, ಛಾಯಾಗ್ರಾಹಕರಾಗಿ ಸತ್ಯ ಹೆಗಡೆ, ಮೋಹನ್ ಪಂಡಿತ್ ಅವರ ಕಲಾ ನಿರ್ದೇಶನದಲ್ಲಿ, ರವಿ ಬಸ್ರೂರು  ಸಂಗೀತ ನಿರ್ದೇಶನ ಮಾಡಿದ್ದು, ಒಳ್ಳೆಯ ಹಿನ್ನಲೆ ಸಂಗೀತ ನೀಡಿ ನಾಲ್ಕು ಹಾಡುಗಳನ್ನು ಮಾಡಿದ್ದಾರೆ  ಎಂದು ತಿಳಿಸಿದರು.   ಹ್ಯಾಪಿ ಬರ್ತಡೇ ಎಂಬ ಒಂದು ಹೊಸ ಸಾಂಗ್ ಮಾಡಿದ್ದಾರೆ. ಅದು ಬರ್ತಡೆಯ ಅಂಥೆಮ್ ಆಗಬೇಕು  ಎಂದಿದ್ದಾರೆ, ಅಲ್ಲದೇ ಆ ಹಾಡನ್ನು ರಮೇಶ್ ಅರವಿಂದ್ ಅವರೇ ಹಾಡಿರುವುದು    ವಿಶೇಷವಾಗಿದೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: