ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಪ್ರಧಾನಿಯೊಂದಿಗೆ ಚರ್ಚೆ ನಡೆದಿದೆ : ಸಿಎಂ ಮಾಹಿತಿ

ರಾಜ್ಯ (ಬೆಂಗಳೂರು),ನ.11 :-  ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರ ಜೊತೆ ಚರ್ಚಿಸಿದ್ದೇನೆ ಮತ್ತು ಪ್ರಧಾನಿಗಳನ್ನು ರಾಜ್ಯಕ್ಕೆ ಆಹ್ವಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಪ್ರಧಾನಿಗಳನ್ನು ಮತ್ತು  ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ  ರೈಲ್ವೆ ಸರ್ಬರ್ ಬನ್ ನ ಅಡಿಗಲ್ಲು ಸಮಾರಂಭ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆ ಮತ್ತು 180 ಕ್ಕಿಂತ ಹೆಚ್ಚು ಐ.ಟಿ.ಐ ಕೇಂದ್ರಗಳನ್ನು ಅಭಿವೃದ್ಧಿಯನ್ನು  ಮಾಡಿರುವುದರ  ಉದ್ಘಾಟನೆಗೆ ಬರಲು ಆಹ್ವಾನಿಸಿದ್ದೇನೆ.  ನಾನು ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಬರುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆಂದು ತಿಳಿಸಿದ್ದಾರೆ.

ನಾನು ಅಧಿಕಾರಕ್ಕೆ ಬಂದು ನೂರು ದಿನಗಳಾಗಿದ್ದು  ಈ ಅವಧಿಯಲ್ಲಿ ತೆಗೆದುಕೊಂಡಿರುವ ತೀರ್ಮಾನಗಳ ಬಗ್ಗೆ ಬಹಳಷ್ಟು ಸಂತೋಷ ಪಟ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.  ವಿಶೇಷವಾಗಿ ರೈತರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ  ಯೋಜನೆಯು ಕರ್ನಾಟಕದಲ್ಲಿ ಯಶಸ್ವಿಯಾಗಬೇಕು  ಯಾಕೆಂದರೆ  ಎಲ್ಲ ರೈತರ ಹೆಸರು ಮತ್ತು ಮಾಹಿತಿಗಳು ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಇರುವುದು ಕರ್ನಾಟಕ ಸರ್ಕಾರದಲ್ಲಿ ಮಾತ್ರ. ಹಾಗಾಗಿ ಈ ಯೋಜನೆ ಯಶಸ್ವಿಯಾಗಬೇಕು. ಅದನ್ನು ನೋಡಿ ಬೇರೆ ರಾಜ್ಯಗಳು ಅನುಕರಣೆ ಮಾಡುವ ಹಾಗಾಗಲಿ  ಎಂದು ಪ್ರಧಾನಿಯವರು ಶುಭ ಹಾರೈಸಿದ್ದಾರೆಂದು ತಿಳಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: