ಸುದ್ದಿ ಸಂಕ್ಷಿಪ್ತ
ಮೇ.6ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಪ್ರತಿಮೆ ಆನಾವರಣ
ಮೈಸೂರು ಮೇ.5 : ಜೈಭೀಮ್ ಕ್ಷೇಮಾಭಿವೃದ್ಧಿ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ 126ನೇ ಜಯಂತಿ ಮತ್ತು ಪ್ರತಿಮೆ ಅನಾವರಣ ಹಾಗೂ ಸಂಘದ 20ನೇ ವರ್ಷದ ವಾರ್ಷಿಕೋತ್ಸವವನ್ನು ಮೇ.6ರಂದು ಸಂಜೆ 6.30ಕ್ಕೆ ಸರಸ್ವತಿಪುರಂನ ಸಂಘದ ಕಚೇರಿಯಲ್ಲಿ ಆಯೋಜಿಸಿದೆ. ಸಚಿವ ಪ್ರಿಯಾಂಕ ಖರ್ಗೆ ಪ್ರತಿಮೆ ಅನಾವರಣಗೊಳಿಸುವರು, ಸಂಸದ ದೃವನಾರಾಯಣ ಅಧ್ಯಕ್ಷತೆ ವಹಿಸುವರು, ಶಾಸಕ ವಾಸು, ಜಿ.ಪಂ. ಸದಸ್ಯೆ ಪುಷ್ಪಾ ಅಮರನಾಥ್, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು, ಶಾಸಕ ನರೇಂದ್ರ ಸ್ವಾಮಿ ಹಾಗೂ ಅಂಬೇಡ್ಕರ್ ಚಿಂತಕ ಜ್ಞಾನ ಪ್ರಕಾಶ ಸ್ವಾಮೀಜಿ ಭಾಷಣಕಾರರಾಗಿ ಆಗಮಿಸುವರು. (ಕೆ.ಎಂ.ಆರ್.)