ಸುದ್ದಿ ಸಂಕ್ಷಿಪ್ತ
ಮೇ.8 ರಿಂದ 10ರವರೆಗೆ ಉಚಿತ ಗರ್ಭಕಂಠದ ತಪಾಸಣಾ ಶಿಬಿರ
ಮೈಸೂರು ಮೇ.5 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮೇ.8 ರಿಂದ 10ರವರೆಗೆ ಉಚಿತ ಗರ್ಭಕಂಠದ ತಪಾಸಣೆ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ರಕ್ತದೊತ್ತಡ, ಸಂಪೂರ್ಣ ರಕ್ತ ಪರೀಕ್ಷೆ, ಪ್ಯಾಪ್ ಸ್ಮಿಯರ್ ತಪಾಸಣೆ ಮತ್ತು ಸ್ತ್ರೀ ರೋಗ ತಜ್ಞರೊಂದಿಗೆ ಆಪ್ತ ಸಮಾಲೋಚನೆಯನ್ನು ಆಯೋಜಿಸಿದೆ. ಶಿಬಿರವೂ ಪ್ರತಿ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ನಡೆಯುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 95380 52378 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)