ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಗ್ರ್ಯಾಂಡ್ ಓಪನಿಂಗ್ ಪಡೆದ ‘ಪ್ರೇಮಂ ಪೂಜ್ಯಂ’ ಸಿನಿಮಾ

ರಾಜ್ಯ (ಬೆಂಗಳೂರು),ನ.12:-  ಲವ್ಲಿಸ್ಟಾರ್ ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಸಿನಿಮಾ ಇಂದು ತೆರೆಕಂಡಿದ್ದು , ಮಳೆಯ ನಡುವೆಯು ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ.

ನೆನಪಿರಲಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಚಿತ್ರವು ಅವರ 25 ನೇ ಚಿತ್ರವಾಗಿದೆ. ಇಂದು ಬೆಳಿಗ್ಗೆ ಸುರಿಯುತ್ತಿರುವ ಮಳೆಯ ನಡುವೆಯೇ ಸಿನಿ ರಸಿಕರು ಸಿನಿಮಾಕ್ಕೆ ಉತ್ತಮವಾದ ಓಪನಿಂಗ್ ಕೊಟ್ಟಿದ್ದಾರೆ . ಈ ವೇಳೆ ಫಸ್ಟ್ ಡೇ ಫಸ್ಟ್ ಶೋ ವನ್ನು ಕುಟುಂಬದವರ ಜೊತೆ ನೋಡಲು ಬಂದ ನಾಯಕ ನಟ ಪ್ರೇಮ್ ಗೆ ಅಭಿಮಾನಿಗಳು ಹೂವಿನ ಹಾರವನ್ನು ಹಾಕಿ ಗೌರವಿಸಿ   ತಮ್ಮ ಅಭಿಮಾನವನ್ನು ತೋರಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: