ಮೈಸೂರು

ನ.14 ರಿಂದ ನ.20 ರವರೆಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರ

ಮೈಸೂರು,ನ.12 : – 2021-22 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ, ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು . ಮೈಸೂರು ವಿಶ್ವವಿದ್ಯಾನಿಲಯದ ಎನ್. ಎಸ್.ಎಸ್. ಭವನ, ಸರಸ್ವತಿಪುರಂನಲ್ಲಿ ಆಯೋಜಿಸಲಾಗಿದೆ.
ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ರಾ.ಸೇ.ಯೋ ಸಂಯೋಜನಾಧಿಕಾರಿಗಳಾದ ಪ್ರೊ, ಬಿ. ಸುರೇಶ ,ಮಾತನಾಡಿ , ರಾಷ್ಟ್ರೀಯ ಐಕ್ಯತೆಯು ಇಂದು ಅತ್ಯಂತ ಮಹತ್ವ ಪೂರ್ಣ ವಿಷಯವಾಗಿದ್ದು ಯುವಕರಲ್ಲಿ ಈ ಕುರಿತು ಜಾಗೃತಿಯನ್ನು ಉಂಟು ಮಾಡುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ, ಮೈಸೂರು ವಿಶ್ವವಿದ್ಯಾನಿಲಯ , ಮೈಸೂರು ಇವರ ಸಹಯೋಗದೊಂದಿಗೆ , ನ.14 ರಿಂದ ನ.20 ರವರೆಗೆ, ಎನ್. ಎಸ್.ಎಸ್. ಭವನ, ಸರಸ್ವತಿಪುರಂ, ಸಾಹುಕಾರ್ ಚೆನ್ನಯ್ಯ ರಸ್ತೆ, ಮೈಸೂರು ಇಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು(National integration camp) ಆಯೋಜಿಸಲಾಗಿದೆ ಎಂದರು.
ಈ ಶಿಬಿರದಲ್ಲಿ ಭಾರತದ ವಿವಿಧ ರಾಜ್ಯಗಳ ಸುಮಾರು 150 ರಾ.ಸೇ.ಯೋ. ಸ್ವಯಂ ಸೇವಕರು ಭಾಗವಹಿಸಲಿದ್ದು ರಾಷ್ಟ್ರೀಯ ಭಾವೈಕ್ಯತೆ ಕುರಿತಾಗಿ ವಿವಿಧ ಕಾರ್ಯಾಗಾರ , ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದ ಉದ್ಘಾಟನೆಯನ್ನು ನ.14ರಂದು ಸಂಜೆ 4 ಗಂಟೆಗೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಕೆ.ಸಿ. ನಾರಾಯಣಗೌಡ ನೆರವೇರಿಸಿಕೊಡುವರು. ಮೈಸೂರು ವಿ.ವಿ. ಯ ಕುಲಪತಿಗಳಾದ ಪ್ರೊ.ಜಿ ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಾಪ್ ಲಿಂಗಯ್ಯ ರಾಜ್ಯ ರಾ.ಸೇ.ಯೋ. ಅಧಿಕಾರಿಗಳು . ಎಂ.ಎನ್. ನಟರಾಜ್, ರಾಜ್ಯ ನಿರ್ದೇಶಕರು , ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಇವರುಗಳು ಉಪಸ್ಥಿತರಿರುತ್ತಾರೆ.
ಈ ಶಿಬಿರದ ಸಮಾರೋಪ ಕಾರ್ಯಕ್ರಮವು ನ.20ರಂದು ನೆರವೇರಲಿದ್ದು, ಮೈಸೂರು ವಿ.ವಿ ಯ ಕುಲಸಚಿವ ಪ್ರೊ.ಆರ್.ಶಿವಪ್ಪ ವಹಿಸಲಿದ್ದು, ಸಮಾರೋಪ ಭಾಷಣವನ್ನು ಕೆ.ವಿ.ಖಾದ್ರಿನರಸಿಂಹಯ್ಯ ಪ್ರಾದೇಶಿಕ ನಿರ್ದೇಶಕರು ರಾ.ಸೇ.ಯೋ. ಭಾರತ ಸರ್ಕಾರ ಇವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ, ಬಿ.ಕೆ. ಶಿವಣ್ಣ ವಿಶ್ರಾಂತ ರಾ.ಸೇ.ಯೋ ಕಾರ್ಯಕ್ರಮ, ಸಂಯೋಜನಾಧಿಕಾರಿಗಳು, ಮೈ.ವಿ.ವಿ ಇವರು ನೆರವೇರಿಸಿಕೊಡಲಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: