ಮೈಸೂರು

ಮಳೆಯ ನಡುವೆಯೂ ಮನೆಮನೆ ಪಾದಯಾತ್ರೆ ಮಾಡಿ ಸಮಸ್ಯೆ ಆಲಿಸಿದ ಮಾಜಿ ಶಾಸಕ ಎಂಕೆಎಸ್

ಮೈಸೂರು, ನ.12:-ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 62 ರ ವಿವಿಧ ಕ್ರಾಸ್ ಗಳಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಮಳೆಯ ನಡುವೆಯೂ ಮನೆ ಮನೆ ಪಾದಯಾತ್ರೆ ಕೈಗೊಂಡು ಮೂಲಭೂತ ಸಮಸ್ಯೆಗಳನ್ನು ಆಲಿಸಿದರು.

ಇದೇ ವೇಳೆ 32 ಕ್ರಾಸ್ ನಲ್ಲಿ ಮನೆ ನಂಬರ್ 1034 ಕ್ಕೆ ಒಳಚರಂಡಿ ನೀರು ತುಂಬಿ ನರಕಯಾತನೆ ಅನುಭವಿಸುತ್ತಿರುವುದನ್ನು ಮನಗಂಡು ಸ್ಥಳಕ್ಕೆ ಭೇಟಿ ನೀಡಿ ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿ ತುರ್ತಾಗಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ವಾರ್ಡಿನ ಸೇಂಟ್ ಥಾಮಸ್ ಶಾಲೆ ಎದುರು ಹಾಗೂ ವಿವಿಧೆಡೆ ಯುಜಿಡಿ ಕುಸಿದು ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರು ಪರದಾಡುವಂತಾಗಿದ್ದು ಕೂಡಲೇ ಪರಿಹರಿಸುವಂತೆ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ತಿಳಿಸಿದರು.

ಈ ವೇಳೆ ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್,ಕಾಂಗ್ರೆಸ್ ಮುಖಂಡರಾದ ನಾಗರತ್ನ ಮಂಜುನಾಥ್ ,ವಾರ್ಡ್ ಅಧ್ಯಕ್ಷರಾದ ಶಂಕರ್,ಗಿರಿ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: