ಮೈಸೂರು

ಕರುವಿಗೆ ಅಪ್ಪು ಹೆಸರಿಟ್ಟು ಪ್ರೀತಿ ಮೆರೆದ ಶ್ಯಾಂ

ಮೈಸೂರು,ನ.13:-  ಮೈಸೂರಿನ ಕೆ.ಆರ್. ಎಸ್ ರಸ್ತೆಯಲ್ಲಿರುವ ಶಿವದತ್ತಸಾಯಿ ಮಂದಿರ  ಗೋಶಾಲೆಯಲ್ಲಿ ಪುನೀತ್ ಅವರ ನೆನಪಿಗಾಗಿ ಕರುವೊಂದಕ್ಕೆ   ಅಪ್ಪು ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ನಾಮಕರಣವನ್ನು ಮಾಡಿದ್ದಾರೆ.

ಕೆ.ಆರ್. ಎಸ್  ರಸ್ತೆಯಲ್ಲಿರುವ  ಶಿವದತ್ತ ಸಾಯಿ ಮಂದಿರ ಗೋಶಾಲೆಗೆ ಗೋಯಲ್  ಸಂಸಾರವು  ಮಲೆನಾಡ ಗಿಡ್ಡ ಎಂಬ ದೇಶಿ ತಳಿಯ ಹಸು ಮತ್ತು ಕರುವನ್ನು ನೀಡಿದ್ದಾರೆ.  ಆ ಹಸುವಿಗೆ ಪಾರ್ವತಿ ಮತ್ತು ಗಂಡು ಕರುವಿಗೆ ಪುನೀತ್ ಅವರ ಸ್ಮರಾರ್ಥವಾಗಿ  ಅಪ್ಪು ಎಂದು  ಹೆಸರಿಟ್ಟು ಅವರಲ್ಲಿರುವ ಅಪ್ಪು ಮೇಲಿನ ಅಭಿಮಾನವನ್ನು ತೋರಿಸಿದ್ದಾರೆ.  (ಎಸ್.ಎಂ)

Leave a Reply

comments

Related Articles

error: