ಕರ್ನಾಟಕಪ್ರಮುಖ ಸುದ್ದಿ

ಮದ್ಯದಂಗಡಿಯಲ್ಲಿ ಕಳುವು ಮಾಡಿದ್ದ ಮೂವರು ಕಳ್ಳರ ಬಂಧನ

ರಾಜ್ಯ(ಮಂಡ್ಯ),ನ.15:- ಕೆ.ಆರ್.ಎಸ್.ಠಾಣಾ ಪೊಲೀಸರು  ಯಶಸ್ವಿ ಕಾರ್ಯಾಚರಣೆ ನಡೆಸಿ ಮೂವರು ಕಳ್ಳರನ್ನು ಬಂಧಿಸಿದ್ದಾರೆ.

ಎಂ.ಎಸ್.ಐ.ಎಲ್ ಮದ್ಯದ  ಮಳಿಗೆಯ ಹಿಂಬದಿ ಗೋಡೆ ಕೊರೆದು ಕಳುವು ಮಾಡಿದ್ದ ಮೂವರು ಆರೋಪಿಗಳು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಕೊಂಗಳ್ಳಿ ಗ್ರಾಮದ ಶ್ರೀಧರ,ಸಿದ್ದ ಹಾಗೂ ಸಂತೋಷ್ ಬಂಧಿತ ಆರೋಪಿಗಳು.ಇವರು ನವೆಂಬರ್ 7 ರಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆ.ಆರ್.ಸಾಗರ-ಬೃಂದಾವನ ಮುಖ್ಯ ರಸ್ತೆಯಲ್ಲಿರುವ ಎಂಎಸ್ ಐಎಲ್ ಮಳಿಗೆಯಲ್ಲಿ ಕಳ್ಳತನ ಕೃತ್ಯವೆಸಗಿದ್ದರು. ಹಿಂಬದಿಯ ಗೋಡೆ ಕೊರೆದು 3 ಸಾವಿರ ನಗದು ಹಾಗೂ 22,778/- ರೂ ಮೌಲ್ಯದ ಮದ್ಯದ ಬಾಟಲಿಗಳನ್ನು  ಕಳ್ಳತನ ಮಾಡಿದ್ದರು. ಡಿ.ವೈ.ಎಸ್ಪಿ ಸಂದೇಶ್ ಕುಮಾರ್ ಹಾಗೂ ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕ ಯೋಗೇಶ್ ಮಾರ್ಗದರ್ಶನದಲ್ಲಿ ಕೆ.ಆರ್.ಎಸ್.ಠಾಣೆಯ ಪಿಎಸ್ಸೈ ಲಿಂಗರಾಜು ಹಾಗೂ ಸಿಬ್ಬಂದಿಗಳಾದ ಲಕ್ಷ್ಮಿಪುತ್ರ,ತೌಸೀಫ್,ಯದುರಾಜ್,ಡ್ರೈವರ್ ಸಂತೋಷ್ ಕುಮಾರ್ ಅವರನ್ನೊಳಗೊಂಡ ತಂಡ ಆರೋಪಿಗಳ ಸೆರೆಗೆ ಜಾಲ ಬೀಸಿತ್ತು. ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನುನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಾರೆ, ಕಂಬಳಿ ಹಾಗೂ 2 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: