
ಕರ್ನಾಟಕಪ್ರಮುಖ ಸುದ್ದಿ
ಪಕ್ಷದ ಕಾರ್ಯಕರ್ತರ ಮೇಲೆಯೇ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ರಾಜ್ಯ(ಬೆಂಗಳೂರು),ನ.17:- ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಅವರನ್ನು ನೀವು ಅವಮಾನಿಸಿದ್ದೀರಿ, ನೀವೆಲ್ಲ ಕಾಂಗ್ರೆಸ್ ಪಕ್ಷದ ದ್ರೋಹಿಗಳು ಎಂದು ಪಕ್ಷದ ಕಾರ್ಯಕರ್ತರ ವಿರುದ್ಧವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣ ಮಾಡುವಾಗ ಪಕ್ಷದ ಕಾರ್ಯಕರ್ತರು ಜಮೀರ್ ಅವರ ಭಾವಚಿತ್ರಗಳನ್ನು ಹಿಡಿದು ಮತ್ತು ಡಿಕೆ ಡಿಕೆ ಎಂದು ಘೋಷಣೆ ಕೂಗುತ್ತಿರುವುದನ್ನು ಕಂಡು ಮಾಜಿ ಸಿಎಂ ಸಿದ್ದರಾಮಯ್ಯನವರು ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದಾರೆ.
ಇದನ್ನು ಕಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಲ್ಲಿ ಯಾವ ವ್ಯಕ್ತಿಯ ಪೂಜೆಗೂ ಅವಕಾಶ ಕೊಡುವುದಿಲ್ಲ. ಇಲ್ಲಿ ಕಾಂಗ್ರೆಸ್ ಪೂಜೆ ಮಾತ್ರ ಅದಕ್ಕೆ ನೀವು ಆದ್ಯತೆ ಕೊಡಬೇಕು. ಇಡೀ ಕಾರ್ಯಕರ್ತರನ್ನು ಎತ್ತಿ ಆಚೆ ಹಾಕಿಸೋದಕ್ಕೂ ನನಗೆ ಗೊತ್ತು. ಈ ರೀತಿಯ ಪುಂಡಾಟಿಕೆಯನ್ನು ಬಿಟ್ಟುಬಿಡಬೇಕು. ಓರ್ವ ವಿರೋಧ ಪಕ್ಷದ ನಾಯಕ ಭಾಷಣ ಮಾಡುವಾಗ ಅವರನ್ನೇ ಅವಮಾನಿಸಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿಯುವ ಹಾಗೆ ನೀವು ಮಾಡಿದ್ದೀರಿ,ಗೌರವವಿಲ್ಲದ ರೀತಿಯಲ್ಲಿ ವರ್ತಿಸಿದ್ದೀರಿ, ನೀವೆಲ್ಲ ಕಾಂಗ್ರೆಸ್ ಪಕ್ಷದ ದ್ರೋಹಿಗಳು ಎಂದು ಪಕ್ಷದ ಕಾರ್ಯಕರ್ತರ ಮೇಲೆಯೇ ಕಿಡಿಕಾರಿದ್ದಾರೆ. (ಎಸ್.ಎಂ,ಎಸ್.ಎಚ್)