ಮೈಸೂರು
ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರೈತನ ಮೇಲೆ ಹಾಡಹಗಲೇ ಚಿರತೆ ದಾಳಿ
ಮೈಸೂರು,ನ.18:- ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೈತರೋರ್ವರ ಮೇಲೆ ಹಾಡಹಗಲಿನಲ್ಲೇ ಚಿರತೆ ದಾಳಿ ನಡೆಸಿದ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿಯಲ್ಲಿ ನಡೆದಿದೆ.
ಹಾಡಹಗಲಿನಲ್ಲೇ ಚಿರತೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ರೈತರನ್ನು ಸಿದ್ದಪ್ಪ (48) ಎಂದು ಹೇಳಲಾಗಿದೆ. ಇವರು ಬಾಳೆ ತೋಟದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾಗ ಚಿರತೆ ಹಠಾತ್ ದಾಳಿ ನಡೆಸಿದೆ. ಸಿದ್ದಪ್ಪನವರ ಚೀರಾಟದಿಂದ ಭಯಭೀತವಾಗಿ ಸ್ಥಳದಿಂದ ಪರಾರಿಯಾಗಿದೆ. ರೈತ ಸಿದ್ದಪ್ಪನವರ ತಲೆ, ಮೂಗು ತೊಡೆಗಳಿಗೆ ಗಾಯವಾಗಿದ್ದು, ರಕ್ತ ಸುರಿದಿದೆ. ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಗಾಯಾಳುವನ್ನು ಕರೆದೊಯ್ಯಲಾಗಿದೆ. (ಕೆ.ಎಸ್,ಎಸ್.ಎಚ್)