ಮೈಸೂರು

ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಗೆ ನವೆಂಬರ್ 23ರಿಂದ ನೊಂದಣಿ ಆರಂಭ

ಮೈಸೂರು, ನ. 18:- ಕರ್ನಾಟಕ ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಲು ನವೆಂಬರ್ 23ರಿಂದ ನೊಂದಣಿ ಆರಂಭವಾಗಲಿದೆ ಎಂದು ಮೈಸೂರು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಹೇಳಿದರು.
ಮೈಸೂರಿನ ಬಂಡಿಪಾಳ್ಯ ಎ.ಪಿ.ಎಂ.ಸಿ. ಆವರಣ, ನಂಜನಗೂಡು ಎ.ಪಿ.ಎಂ.ಸಿ. ಆವರಣ, ಬಿಳಿಗೆರೆ ಎಪಿಎಂಸಿ ಆವರಣ, ಟೀನರಸೀಪುರ ಎ.ಪಿ.ಎಂ.ಸಿ. ಆವರಣ, ಬನ್ನೂರು ಎಪಿಎಂಸಿ ಆವರಣ, ಕೆ.ಆರ್.ನಗರ ಎ.ಪಿ.ಎಂ.ಸಿ. ಆವರಣ, ಚುಂಚನಕಟ್ಟೆಯ ಶ್ರೀರಾಮ ಚುಂಚನ ಕಟ್ಟೆ ಸಕ್ಕರೆ ಕಾರ್ಖನೆ ಆವರಣ, ಹೆಚ್.ಡಿ.ಕೋಟೆ ಎ.ಪಿ.ಎಂ.ಸಿ. ಆವರಣ, ಸರಗೂರು ಎಪಿಎಂಸಿ ಆವರಣ, ಹುಣಸೂರು ಎ.ಪಿ.ಎಂ.ಸಿ. ಆವರಣ, ರತ್ನಪುರಿ ಎಪಿಎಂಸಿ ಆವರಣ, ಪಿರಿಯಾಪಟ್ಟಣ ಎ.ಪಿ.ಎಂ.ಸಿ. ಆವರಣ, ಬೆಟ್ಟದಪುರ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿಸಲು ರೈತರ ನೊಂದಾವಣೆ ಮಾಡಿಕೊಳ್ಳಲಾಗುತ್ತದೆ.
ರೈತರಿಂದ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 1940ರೂ, ಗ್ರೇಡ್ ಎ ಭತ್ತಕ್ಕೆ 1960 ರೂ ರಂತೆ ಖರೀದಿ ಮಾಡಲಾಗುವುದು. ಎಂಎಸ್‌ಪಿ ನೊಂದಣಿ ಕೇಂದ್ರಕ್ಕೆ ರೈತರು ಫ್ರೂಟ್ಸ್ ಐಡಿ, ಆಧಾರ್ ಕಾರ್ಡ್ ಜೋಡಣೆ ಮಾಡಿದ ಮತ್ತು NPCI ACTIVATE ಇ ಆಗಿರುವ ಬ್ಯಾಂಕ್ ಖಾತೆಯ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಬರಬೇಕಾಗಿದೆ.
ನೊಂದಾಯಿಸಿಕೊAಡ ರೈತರಿಂದ ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುತ್ತಿದ್ದು, ರೈತರು ಸರಬರಾಜು ಮಾಡುವ ಭತ್ತದ ಗುಣಮಟ್ಟವನ್ನು ಪರೀವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುವುದು. ರೈತರಿಂದ ಖರೀದಿಸುವ ಭತ್ತದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಹಂತೇಶಪ್ಪ, ಮೈಸೂರು ಉಪವಿಭಾಗಾಧಿಕಾರಿ ಕಮಲಾ ಬಾಯಿ, ಹುಣಸೂರು ಉಪವಿಭಾಗಾಧಿಕಾರಿ ವರ್ನಿತ್ ನೇಗಿ, ಆಹಾರ ಮತ್ತು ನಾಗರಿಕ ಸರಬರಾಜು ಜಂಟಿ ನಿರ್ದೇಶಕರಾದ ಕುಮುದಾ ಶರತ್ ಮತ್ತಿತರರು ಉಪಸ್ಥಿತಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: