ಪ್ರಮುಖ ಸುದ್ದಿಮೈಸೂರು

ಸೋಲಿಗೆ ಕಾರಣರಾದವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ನ.19:- ವಿಧಾನಸಭಾ ಚುನಾವಣೆ ನಡೆದು ಮೂರು ವರ್ಷಗಳೆ ಆಗಿದೆ. ಆದರೂ ಚುನಾವಣೆಯಲ್ಲಿ ಸೋತ ಕಹಿ ನೆನಪನ್ನು ಸಿದ್ದರಾಮಯ್ಯ ಅವರು ಇನ್ನು ಮರೆತಿಲ್ಲ. ಮೈಸೂರಿನ ಚಾಮುಂಡೇಶ್ವರಿ ಚುನಾವಣೆಯ ಸೋಲು ಸಿದ್ದರಾಮಯ್ಯ ಅವರಿಗೆ ಹೆಜ್ಜೆ ಹೆಜ್ಜೆಗೂ ಕಾಡುತ್ತಲೆ ಇದೆ.

ಇಂದು ಮತ್ತೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನೆದ ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿಗೆ ಕಾರಣರಾದವ ರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡಗೆ ಎಂಎಲ್ಸಿ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಮನವಿ ಮಾಡಿದ್ದರು. ಈ ವೇಳೆ ಟಿಕೇಟ್ ಕೇಳಿದ ಅಭಿಮಾನಿಗಳಿಗೆ ಸಿದ್ದರಾಮಯ್ಯ ಅವರು ಮಾಸ್ಕ್ ತೆಗೆದು ಬೈದಿದ್ದಾರೆ.

ಎಲ್ಲಾ ನನ್ನ ಸೋಲಿಸಿ ಬಿಟ್ಟು ಇಲ್ಲಿ ಬಂದಿದ್ದೀರಿ. ನಿಮ್ಮ ಆತ್ಮ ಮುಟ್ಟಿಕೊಂಡು ಹೇಳಿ ನನ್ನ ಸೋಲಿಸಿಲ್ಲ ಅಂತ. ನಾಚಿಕೆ ಆಗೋದಿಲ್ವ ನಿಮಗೆ ಎಂದು ಸಿದ್ದರಾಮಯ್ಯ ಗುಡುಗಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: