ಕರ್ನಾಟಕಪ್ರಮುಖ ಸುದ್ದಿಮೈಸೂರು

24ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು : ಸಚಿವ ಆರ್ ಅಶೋಕ್ ವಿಶ್ವಾಸ

ಮೈಸೂರು,ನ.20 : -ಕರ್ನಾಟಕದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 24 ಕ್ಷೇತ್ರಗಳಲ್ಲೂ, ಬಿಜೆಪಿ ಗೆಲುವನ್ನು ಸಾಧಿಸುವ ಮುಖಾಂತರ ವಿಧಾನ ಪರಿಷತ್ ನಲ್ಲಿ ಇರುವ ಬಹುಮತದ ಕೊರತೆಯನ್ನು ನೀಗಿಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬಿಜೆಪಿ ಸರ್ಕಾರವು ನಡೆಸುತ್ತಿರುವ ಜನಸ್ವರಾಜ್ ಕಾರ್ಯಕ್ರಮವು ಇಂದು ಮೈಸೂರಿನ ವಸ್ತು ಪ್ರದರ್ಶನದ ಆವರಣದ ಕಾಳಿಂಗರಾವ್ ರಂಗಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬರುವ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲೂ ಕೂಡ ಕರ್ನಾಟಕಕ್ಕೆ ಸಂಬಂಧಿಸಿದ ಜನ ಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಒಂದು ಸರಳವಾದ ಬಹುಮತ ಸಿಗಬೇಕು ಎಂದರು. ಎಲ್ಲ ದೃಷ್ಠಿಯಿಂದಲೂ ಕೂಡ ಈ ಚುನಾವಣೆ ಬಹಳ ಮಹತ್ವವಾಗಿದೆ ಎಂದು ತಿಳಿಸಿದರು.
ಅದಕ್ಕಾಗಿ ನಮ್ಮ ಇಡೀ ಕರ್ನಾಟಕದಲ್ಲಿ ನಮ್ಮ ಪಕ್ಷ ನಾಲ್ಕೈದು ತಂಡಗಳಾಗಿ ರಾಜ್ಯದಲ್ಲಿ ಪ್ರವಾಸವನ್ನು ಮಾಡುತ್ತಿದೆ. ಬಿಜೆಪಿ ಚುನಾವಣಾ ಪ್ರಚಾರವನ್ನು ಮೊದಲ ಸ್ಥಾನದಲ್ಲಿ ನಾವು ಶುರು ಮಾಡಿದ್ದೇವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಗಳು ಇನ್ನೂ ಅಭ್ಯರ್ಥಿಗಳ ಗೊಂದಲದಲ್ಲಿದ್ದಾರೆ. ನಾವು ಭರದಿಂದ ಚುನಾವಣಾ ಕೆಲಸಗಳನ್ನು ಶುರು ಮಾಡಿದ್ದೇವೆ. ಗ್ರಾಮಪಂಚಾಯಿತಿ ಅವರಿಗೆ ನಾವು ಹೆಚ್ಚಿನ ಅಧಿಕಾರವನ್ನು ಕೊಟ್ಟಿದ್ದೇವೆ, ಅಲ್ಲಿ ಒಳ್ಳೆಯ ಕೆಲಸಗಳು ಆಗುತ್ತಿವೆ ಮತ್ತಷ್ಟು ಒಳ್ಳೆಯ ಕೆಲಗಳು ಆಗಬೇಕು , ಅದನ್ನು ವಿಧಾನ ಪರಿಷತ್ ನಲ್ಲಿ ಈ ಸಮಸ್ಯೆಗಳನ್ನು ಮಾತನಾಡುವುದಕ್ಕೆ ಅಭ್ಯರ್ಥಿ ಬೇಕಾಗಿದೆ, ಅದಕ್ಕಾಗಿ ನಾವು ಈ ಒಂದು ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವ ಸಲುವಾಗಿ ಈ ಚುನಾವಣಾ ಪ್ರಚಾರವನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರದಲ್ಲಿ ಬೊಮ್ಮಾಯಿ ಮತ್ತು ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿ ಇರುವಾಗ ಜನರ ಮನೆ ಬಾಗಿಲಿಗೆ ಅಧಿಕಾರವನ್ನು ಕೊಡಬೇಕು ಎನ್ನುವ ಯೋಜನೆಯನ್ನು ಜಾರಿ ಮಾಡುತ್ತೇವೆ, ಈ ಹಿಂದೆ ಕಾಂಗ್ರೆಸ್ ನ ಪ್ರಧಾನಿ ರಾಜೀವ್ ಗಾಂಧಿ ಇರುವಾಗ ಹೇಳುತ್ತಿದ್ದರು ಕೇಂದ್ರ ಸರ್ಕಾರ ನೂರು ರೂಪಾಯಿ ಕೊಟ್ಟರೆ ಅದು ಗ್ರಾಮ ಪಂಚಾಯಿತಿಗೆ ಬರುವಷ್ಟರಲ್ಲಿ ಅದು ಹದಿನೈದು ರೂಪಾಯಿಯಾಗಿರುತ್ತದೆ ಅಂತ , ಆದರೆ ಮೋದಿಯವರು ಬಂದ ಮೇಲೆ ಅದು ನೇರವಾಗಿ ಗ್ರಾಮಪಂಚಾಯಿತಿಗೆ ತಲುಪುತ್ತಿದೆ. ಯಾವುದೇ ರೀತಿಯ ಭ್ರಷ್ಟಾಚಾರ ಇಲ್ಲದಿರುವ ಹಾಗೇ ಮಾಡಿರುವುದು ಮೋದಿ ಎಂದು ಹೆಮ್ಮೆಪಟ್ಟರು.
ಅದೇ ರೀತಿ ಬೊಮ್ಮಾಯಿ ಅವರು ಕೂಡ ರೇಷನ್ ಅನ್ನು ಮನೆ ಬಾಗಿಲಿಗೆ ಕೊಡಬೇಕು ಅನ್ನುವ ಯೋಜನೆಯನ್ನು ತರುವಲ್ಲಿದ್ದಾರೆ, ನಮ್ಮ ಕಂದಾಯ ಇಲಾಖೆಯಲ್ಲೂ ಕೂಡ ಈಗಾಗಲೇ ಮನೆ ಬಾಗಿಲಿಗೆ ಪಿಂಚಣಿಯನ್ನು ಕೊಡುತ್ತಿದ್ದೇವೆ. ಬೊಮ್ಮಾಯಿ ಸರ್ಕಾರ ಇನ್ನಷ್ಟು ಜನ ಪರ ಯೋಜನೆಗಳು ಜಾರಿಗೆ ತರಬೇಕು. ಜನರ ಮನೆ ಬಾಗಿಲಿಗೆ ಸರ್ಕಾರ ಹೋಗಬೇಕು. ಈ ರೀತಿಯ ಯೋಜನೆಗಳನ್ನು ನಾವು ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ನಮ್ಮ ಮುಖ್ಯಮಂತ್ರಿಗಳು ಝೀರೊ ಟ್ರಾಫಿಕ್ ಅನ್ನು ತೆಗೆದು, ಒಬ್ಬ ಸಾಮಾನ್ಯ ಮುಖ್ಯಮಂತ್ರಿ ನಿಮ್ಮ ಮನೆಯ ಮಗನಾಗಿ ಸರಳವಾಗಿ ಆಡಳಿತವನ್ನು ಕೊಡುವ ವ್ಯವಸ್ಥೆಯನ್ನು ಇವತ್ತು ಕರ್ನಾಟಕದಲ್ಲಿ ನಮ್ಮ ಸರ್ಕಾರ ಮಾಡಿದೆ ಎಂದರು.
ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪಗಳನ್ನು ಮಾಡಿರಬಹುದು, ಅವರು ಮುಂದೆಯೂ ಮಾಡುತ್ತಾರೆ, ಆದರೂ ಕೂಡ ಸರ್ಕಾರ ಜನರ ತೊಂದರೆಗಳಿಗೆ ಸ್ಪಂದಿಸುತ್ತಿದೆ, ಇಡೀ ದೇಶದಲ್ಲಿ ಕಾಂಗ್ರೆಸ್ ನ ಪಕ್ಷ ಕ್ಷೀಣಿಸುತ್ತಿದೆ. ಕಾಂಗ್ರೆಸ್ ಬೇಡ ಅನ್ನುವ ಮನಸ್ಥಿತಿ ಜನರಿಗೆ ಬರುತ್ತಿದೆ ಎಂದರು.
ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನವರಿಗೆ ಬೇರೆ ಏನು ಕೆಲಸವಿಲ್ಲ ರಾಜ್ಯದಲ್ಲಿ ಬರುವ ಹೊಸ ಯೋಜನೆಗಳ ಮೇಲೆ ಗೂಬೆ ಕೂರಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ.
ನಾವು ರಾಜ್ಯದಲ್ಲಿ ಪ್ರವಾಸ ಮಾಡಿರುವ ಸ್ಥಳಗಳಲ್ಲಿ ನೋಡಿದ್ದೇವೆ. ಎಲ್ಲೆಲೂ ಬಿಜೆಪಿಯ ಝೇಕಾಂರವೇ ಕೇಳುತ್ತಿದೆ, ಯಡಿಯೂರಪ್ಪ ನವರ ಸರ್ಕಾರದಲ್ಲಿ ಆಗಿರುವ ಕೆಲಸಗಳಿಂದ ನಮ್ಮ ಸರ್ಕಾರದ ಗೌರವ ಮತ್ತು ಘನತೆ ಎರಡು ಕೂಡ ಹೆಚ್ಚಾಗಿದೆ ಎಂದರು. ಇವತ್ತು ಕಾಂಗ್ರೆಸ್ ನವರ ಅಪಪ್ರಚಾರ ಹೆಚ್ಚಿದೆ . ಅಲ್ಲದೆ ನಮ್ಮ ಸರ್ಕಾರದಲ್ಲಿ ಬಂದಿರುವ ಕೋವಿಡ್ ಲಸಿಕೆ ನಮ್ಮ ಸರ್ಕಾರದ ಬಗ್ಗೆ ತಿಳಿಸುತ್ತದೆ. ಇವತ್ತು ಕೇಂದ್ರದಿಂದ ಬರುವ ಅನೇಕ ಯೋಜನೆಗಳು ನೇರವಾಗಿ ಗ್ರಾಮಪಂಚಾಯಿತಿಗೆ ಬರುವ ಹಾಗೇ ಮಾಡಿದ್ದೇ ನಮ್ಮ ಮೋದಿ ಸರ್ಕಾರ . ಸ್ವಚ್ಛ್ ಭಾರತ್ ಅಭಿಯಾನದಡಿ ತುಂಬ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಸಚಿವ ಎಸ್.ಟಿ. ಸೋಮಶೇಖರ್, ಸಚಿವ ಹಾಲಪ್ಪ ಆಚಾರ್, ಸಚಿವ ಎಸ್.ಅಂಗಾರ, ಶಾಸಕ ಅರವಿಂದ ಲಿಂಬಾವಳಿ, ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, ವಿನಯ್ ಬಿದರೆ, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಶಾಸಕ ಎಲ್ ನಾಗೇಂದ್ರ, ಶಾಸಕ ಹರ್ಷವರ್ಧನ್, ಎ.ಹೆಚ್. ವಿಶ್ವನಾಥ್, ಟಿ.ಎಸ್. ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷರಾದ ಮಂಗಳ ಸೋಮಶೇಖರ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಂ)

Leave a Reply

comments

Related Articles

error: