ಮೈಸೂರು

ತಾಲೂಕು ಕಚೇರಿ ಕಟ್ಟಡದಲ್ಲೇ ಪೋಸ್ಟರ್ ಅಳವಡಿಕೆ

ಮೈಸೂರು,ಮೇ.5:-  ಮೈಸೂರು ಮಹಾನಗರ ಪಾಲಿಕೆ ಸರ್ಕಾರಿ ಕಚೇರಿಗಳಲ್ಲಿ ಪೋಸ್ಟರ್ ಹಾಕಬಾರದು.   ಹಾಕಿದರೆ 500ರೂ.ದಂಡ ವಿಧಿಸಲಾಗುವುದು ಎಂದು ಬೊಬ್ಬಿರಿಯುತ್ತಿದ್ದರೂ ಮೈಸೂರು ತಾಲೂಕು ಕಛೇರಿ ಸಿಬ್ಬಂದಿಗಳು ತಮಗೆ ಸಂಬಂಧವೇ ಇಲ್ಲ ಅನ್ನುವಂತೆ ಇದ್ದಾರೆ. ಕಟ್ಟಡದಲ್ಲೇ ಅಧಿಕಾರಿಗಳು ನಡೆಸುವ ಕುರುಕ್ಷೇತ್ರ ನಾಟಕದ  ಬ್ಯಾನರ್ ಅಳವಡಿಸಲಾಗಿದೆ.

ತಾಲೂಕು ಕಂದಾಯ ಅಧಿಕಾರಿಗಳ ಸಂಘ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಬ್ಯಾನರ್ ನಲ್ಲಿ  ಡಿಸಿ ರಂದೀಪ್ , ಎಸಿ ಆನಂದ್ ಮತ್ತು ತಹಶೀಲ್ದಾರ್ ಭಾವಚಿತ್ರಗಳು ರಾರಾಜಿಸುತ್ತಿವೆ. ಅಧಿಕಾರಿಗಳೇ ಈ ರೀತಿ ಕಟ್ಟಡಗಳನ್ನು ದುರುಪಯೋಗ ಮಾಡಿಕೊಂಡರೆ  ಜನಸಾಮಾನ್ಯರು ಇನ್ನೇನು ಮಾಡಬೇಕು
ಎನ್ನೋ ಪ್ರಶ್ನೆಯನ್ನು  ಕೆಲವು ತಾಲೂಕುಪಂಚಾಯತ್ ಸದಸ್ಯರು ಎತ್ತುತ್ತಿದ್ದಾರೆ.

ಬಹುಶಃ ಇಂತಹ ಅವಾಂತರಗಳನ್ನು ನೋಡಿಯೇ ನಮಗೆ ಈ ಬಾರಿ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಕೈತಪ್ಪಿರಬೇಕು ಎಂದು ಹಲವರು ಗೊಣಗಿಕೊಳ್ಳುತ್ತಿದ್ದಾರೆ. – (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: