ಕರ್ನಾಟಕಪ್ರಮುಖ ಸುದ್ದಿ

ಕೊಟ್ಟೂರು ಡಾ. ಸಂಗನಬಸವ ಸ್ವಾಮೀಜಿ ಲಿಂಗೈಕ್ಯ : ಬಿಎಸ್ವೈ ಸಂತಾಪ

ರಾಜ್ಯ(ಬಳ್ಳಾರಿ),ನ.22 : – ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ ಎಂದು ಮಾಜಿ ಸಿಎಂ. ಯಡಿಯೂರಪ್ಪ ಹೇಳಿದ್ದಾರೆ.

ಕೊಟ್ಟೂರು ಮಹಾ ಸಂಸ್ಥಾನದ ಸ್ವಾಮೀಗಳಾದ ತ್ರಿವಿಧ ದಾಸೋಹಿ, ಜದ್ಗಗುರು ಡಾ. ಸಂಗನಬಸವ ಮಹಾಸ್ವಾಮಿಗಳು, ಇಂದು ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ, ಈ ಕುರಿತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀಗಳು ಶಿವಯೋಗಿ ಮಂದಿರ ಅಧ್ಯಕ್ಷರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಲಕ್ಷಾಂತರ ಜನ ಭಕ್ತಾದಿಗಳು ಅವರ ಅನುಯಾಯಿಗಳಾಗಿದ್ದರು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುವುದೇ ಅವರಿಗೆ ನಾವು ಸಲ್ಲಿಸುವ ಶ್ರದ್ದಾಂಜಲಿ ಎಂದು ಹೇಳಿ ಸಂತಾಪವನ್ನು ಸೂಚಿಸಿದ್ದಾರೆ. (ಎಸ್.ಎಂ,ಎಸ್. ಎಚ್)

Leave a Reply

comments

Related Articles

error: