ಕರ್ನಾಟಕಪ್ರಮುಖ ಸುದ್ದಿಮನರಂಜನೆ

ರಾಜಾ ರಾಣಿ ಶೋ ಸಮಾಪ್ತಿ : ಸ್ನೇಹಾ ಗೌಡ ದಂಪತಿಯ ಮುಡಿಗೆ ಕಿರೀಟ

ರಾಜ್ಯ(ಬೆಂಗಳೂರು),ನ.22 :- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಸಮಾಪ್ತಿಗೊಂಡಿದ್ದು ಗ್ರಾಂಡ್ ಫಿನಾಲೆಯಲ್ಲಿ ನೇಹಾಗೌಡ-ಚಂದನ್ ದಂಪತಿಗಳು ಗೆದ್ದು ರಾಜಾ ರಾಣಿಯ ಕೀರಿಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ನಟ ಸೃಜನ್ ಲೋಕೇಶ್ ಮತ್ತು ನಟಿ ತಾರಾ ಅನುರಾಧ ತೀರ್ಪುಗಾರರಾಗಿದ್ದ ಈ ಕಾರ್ಯಕ್ರಮವು ಸಮಾಪ್ತಿಗೊಂಡಿದೆ. ರಿಯಾಲಿಟಿ ಶೋ ಅಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ಅದೇ ರೀತಿ ಈ ಶೋ ಕೂಡ ಅದ್ದೂರಿಯಾಗಿತ್ತು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಲಕ್ಷೀ ಬಾರಮ್ಮ’ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯರಾದವರು ನೇಹಾಗೌಡ. ಅವರು ಚಂದನ್ ಜತೆ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈಗ ಈ ದಂಪತಿಗೆ ರಾಜಾ ರಾಣಿ ಕಿರೀಟ ಒಲಿದು ಬಂದಿದ್ದು, ಸಂಭ್ರಮ ಪಟ್ಟಿದ್ದಾರೆ.
‘ರಾಜಾ ರಾಣಿ’ ಶೋ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಮನೆ ಮಂದಿ ಎಲ್ಲರೂ ಈ ಶೋನ ಇಷ್ಟಪಟ್ಟಿದ್ದರು. ಸೆಲೆಬ್ರಿಟಿಗಳ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅನೇಕರಲ್ಲಿ ಇರುತ್ತದೆ. ‘ರಾಜಾ ರಾಣಿ’ ವೇದಿಕೆ ಮೇಲೆ ಕಿರುತರೆ ಸೆಲೆಬ್ರಿಟಿಗಳ ಸಾಕಷ್ಟು ಗುಟ್ಟುಗಳು ರಟ್ಟಾಗಿತ್ತು. ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಿತ್ತು. ಭಾನುವಾರ ನಡೆದ ಫಿನಾಲೆ ತುಂಬಾನೇ ಅದ್ದೂರಿಯಾಗಿತ್ತು. ಕನ್ನಡ ಬಿಗ್ ಬಾಸ್ ಸೀಸನ್ 8 ವಿನ್ನರ್ ಮಂಜು ಪಾವಗಡ, ಸ್ಪರ್ಧಿಗಳಾದ ಶುಭಾ ಪೂಂಜಾ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: