ಮೈಸೂರು

ನವೆಂಬರ್ 26ರಿಂದ 28ರವರೆಗೆ ‘ಶ್ರೀ ಆರ್ ಗುರುರಾಜಲು ನಾಯ್ಡು ನೆನಪಿನ ಅಂಗಳ ನಾಟಕೋತ್ಸವ’

ಮೈಸೂರು,ನ.25:- ಶ್ರೀರಾಜರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದ ವತಿಯಿಂದ ನವೆಂಬರ್ 26ರಿಂದ 28ರವರೆಗೆ ‘ಶ್ರೀ ಆರ್ ಗುರುರಾಜಲು ನಾಯ್ಡು ಅವರ ನೆನಪಿನ ಅಂಗಳ ನಾಟಕೋತ್ಸವ’ವನ್ನು ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಬಿ.ಎಂ.ರಾಮಚಂದ್ರ ಕಾರ್ಯಕ್ರಮದಲ್ಲಿ ಅವರ ವಿಚಾರ ಸಂಕಿರಣ, ಹರಿಕಥೆ ಹಾಗೂ ಮೂರು ಪೌರಾಣಿಕ ನಾಟಕಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.

ನಾಳೆ ಸಂಜೆ 5.30ಕ್ಕೆ ಕಿರುರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನಾ ಉದ್ಘಾಟನೆ ನೆರವೇರಿಸಲಿದ್ದು ಹಿರಿಯ ರಂಗಕರ್ಮಿ ಪ್ರೊ. ಹೆಚ್.ಎಸ್. ಉಮೇಶ್ ಅಧ್ಯಕ್ಷತೆವಹಿಸಲಿದ್ದಾರೆ. ಆರ್ ಗುರುರಾಜಲು ನಾಯ್ದುರವರ ಪತ್ನಿಯರಾದ ಆರ್.ನವರತ್ನಮ್ಮ, ಪ್ರೇಮಾನಾಯ್ಡು, ಹಿರಿಯ ರಂಗಕರ್ಮಿ ಸುಬ್ಬನರಸಿಂಹ ಪ್ರಕಾಶ್ ಶೆಣೈ ಇವರಿಗೆ ಗೌರವ ಸಮರ್ಪಿಸಲಾಗುವುದು ಎಂದು ತಿಳಿಸಿದರು.ಗುರುರಾಜಲು ನಾಯ್ಡು ಅವರ ಪುತ್ರಿ ಡಾ.ಶೀಲಾ ನಾಯ್ಡು ಅವರಿಂದ ಗಜಗೌರಿವೃತ ಹರಿಕಥೆ ನಡೆಯಲಿದ್ದು, ಬಳಿಕ ಮೋಹಿನಿ ಭಸ್ಮಾಸುರ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಮೂರು ದಿನವೂ ಕಾರ್ಯಕ್ರಮ  5.30ಕ್ಕೆ ಆರಂಭವಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ.ಹೆಚ್.ಎಸ್ ಉಮೇಶ್, ಕಸಾಪ  ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ರಂಗತಂಡ ಕಲಾವಿದರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: