ಕರ್ನಾಟಕದೇಶಪ್ರಮುಖ ಸುದ್ದಿಮೈಸೂರು

ಜಯಲಲಿತಾ ಆರೋಗ್ಯ ಸ್ಥಿತಿ ತೀವ್ರ ಗಂಭೀರ

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎನ್ನುವ ವದಂತಿಗಳು ಹಬ್ಬಿವೆ.

ಇದಕ್ಕೆ ಪೂರಕವೆಂಬಂತೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಿರುವುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರ ಆರೋಗ್ಯದ ಕುರಿತು ವೈದ್ಯರು ಆಗಾಗ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ಒದಗಿಸುತ್ತಿದ್ದರು.

ಆದರೆ, ಕಳೆದ ಎರಡು ದಿನಗಳಿಂದ ವೈದ್ಯರು ಜಯಾ ಆರೋಗ್ಯದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆಸ್ಪತ್ರೆಯ ಸುತ್ತ 3 ಸುತ್ತಿನ ಕೋಟೆಯಂಥ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಯಾವುದೇ ಮಾಧ್ಯಮ ಪ್ರತಿನಿಧಿಗಳನ್ನೂ ಆಸ್ಪತ್ರೆಯ ಹತ್ತಿರಕ್ಕೆ ಬಿಡುತ್ತಿಲ್ಲವಾದ್ದರಿಂದ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ಒದಗಿಸಿದೆ.

ಜಯಾ ಫೋಟೊ ಬಿಡುಗಡೆ ಮಾಡಲು ಪದೇಪದೇ ಒತ್ತಾಯಿಸಿದ್ದರು ಕರುಣಾನಿಧಿ

ಕಾವೇರಿ ವಿವಾದ ಕುರಿತು ಸುಪ್ರೀಂ ಕೋರ್ಟ್‍ ಬೆಳವಣಿಗೆಗಳ ಮಾಹಿತಿ ಪಡೆದು ಆಸ್ಪತ್ರೆಯಲ್ಲೆ ಜಯಲಲಿತಾ ಸಭೆ ನಡೆಸಿದರು ಎನ್ನುವ ವದಂತಿಗಳಿಗೆ ಮೊನ್ನೆಯೇ ವ್ಯಂಗ್ಯಭರಿತ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದ ಡಿಎಂಕೆ ಅಧ್ಯಕ್ಷ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ಜಯಲಲಿತಾ ಸಭೆ ನಡೆಸಿರುವ ಫೋಟೊ ಬಿಡುಗಡೆ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದರು.

ನಿನ್ನೆ ಮತ್ತು ಇಂದು ಅದೇ ವಾಕ್ಯವನ್ನು ಪುನರುಚ್ಚರಿಸಿರುವ ಕರುಣಾನಿಧಿ ಜಯಾ ಆರೋಗ್ಯದ ಬಗ್ಗೆ ಜನರನ್ನು ಗೊಂದಲದಲ್ಲಿಡುವುದು ಬೇಡ. ಕಡೇ ಪಕ್ಷ ಅವರ ಫೋಟೊ ಬಿಡುಗಡೆ ಮಾಡಬಹುದು ಎಂದು ಮತ್ತೆ ಒತ್ತಾಯಿಸಿದ್ದರು.

ಆದರೆ ಶನಿವಾರ ಬೆಳಗ್ಗೆ ಹೇಳಿಕೆ ನೀಡಿ ಜಯಾ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದರು.

ಲಂಡನ್‍ನಿಂದ ಬಂದ ವೈದ್ಯರು:

ಜಯಲಲಿತಾ ಅವರ ಆರೋಗ್ಯ ತೀವ್ರ ವಿಷಮ ಪರಿಸ್ಥಿತಿ ತಲುಪಿದ್ದರಿಂದ ಹೆಚ್ಚಿನ ನಿಗಾ ವಹಿಸಲು ಲಂಡನ್‍ನಿಂದ ತಜ್ಞವೈದ್ಯರು ಆಗಮಿಸಿದ್ದು, ಜಯಲಲಿತಾ ಅವರಿಗೆ ಇರುವ ನಿರ್ದಿಷ್ಟ ಆರೋಗ್ಯ ಸಮಸ್ಯೆ ಯಾವುದು? ಲಂಡನ್‍ನಿಂದ ಆಗಮಿಸಿರುವ ವೈದ್ಯರು ಯಾವ ವಿಷಯದಲ್ಲಿ ಪರಿಣತರು ಎಂಬ ವಿಷಯದ ಕುರಿತೂ ಯಾವುದೇ ಮಾಹಿತಿ ಇಲ್ಲ.

ಇಡಿ ತಮಿಳುನಾಡು ಆಡಳಿತ ಜಯಾ ಆರೋಗ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಗುಟ್ಟು ಮಾಡುತ್ತಿರುವುದನ್ನು ಗಮನಿಸಿದರೆ ಅವರು ಸಾವಿನಂಚಿಗೆ ತಲುಪಿರಬಹುದೆಂಬ ಹಲವಾರು ವದಂತಿಗಳು ತಮಿಳುನಾಡಿನಲ್ಲಿ ಈಗಾಗಲೇ ಹರಿದಾಡುತ್ತಿರವೆ. ಆದರೆ, ಪೊಲೀಸರು ಈ ವದಂತಿಗಳನ್ನು ನಿರಾಕರಿಸಿದ್ದು, ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಏನೇ ಆದರೂ ಈಗಾಗಲೇ ಜಯಲಲಿತಾ ಅವರು ಸಾವನ್ನಪ್ಪಿರಬಹುದು ಎಂಬ ವದಂತಿಗಳು ತಮಿಳುನಾಡಿನಾದ್ಯಂತ ಜನರಿಂದ ಜನರಿಗೆ ಹರಡಿದ್ದು, ಇಡೀ ತಮಿಳುನಾಡು ಮೌನವಾಗಿರುವುದು ನೋಡಿದರೆ ಸುದ್ದಿ ನಿಜವಿರಬಹುದು ಎನ್ನವುದು ಹಲವರ ಅಂಬೋಣ.

Leave a Reply

comments

Related Articles

error: