
ಮೈಸೂರು
ಮಹಿಳೆಯ ಬರ್ಬರ ಕೊಲೆ ಪ್ರಕರಣ : ಆರೋಪಿ ಬಂಧನ
ಮೇ.2ರಂದು ಬೆಳಿಗ್ಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೋರ್ವರ ಬರ್ಬರ ಕೊಲೆಯಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತಳನ್ನು ಕವಿತಾ ಎಂದು ಹೇಳಲಾಗಿದ್ದು, ಆಕೆ ವಿಜಿ ಎಂಬವನ ಜೊತೆ ವಾಸಿಸುತ್ತಿದ್ದಳು. ಭಾಸ್ಕರ್ ಮತ್ತು ಆಕೆಯ ಪತ್ನಿ ಸಹ ವಿಜಿ ಮತ್ತು ಕವಿತಾ ಜೊತೆಗಿದ್ದರು. ವಿಜಿ ಎಂಬಾತನಿಗೆ ಭಾಸ್ಕರ್ ಪತ್ನಿ ಜೊತೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ವಿಜಿ ಕವಿತಾ ಬಳಿ ಬರುವುದನ್ನೇ ನಿಲ್ಲಿಸಿದ. ಇದರಿಂದ ಭಾಸ್ಕರ್ ಮತ್ತು ವಿಜಿ ನಡುವೆ ದೊಡ್ಡ ಜಗಳವೇ ನಡೆದಿತ್ತು. ಇದರಿಂದ ಭಾಸ್ಕರ್ ಕವಿತಾ ತಲೆಯ ಮೇಲೆಯೇ ಕಲ್ಲೆತ್ತಿ ಹಾಕಿ ಆಕೆಯನ್ನು ಸಾಯಿಸಿದ್ದಾನೆ ಎನ್ನಲಾಗಿದೆ. ಮಂಡಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. – (ಕೆ.ಎಸ್,ಎಸ್.ಎಚ್)