ಕರ್ನಾಟಕಪ್ರಮುಖ ಸುದ್ದಿ

ಅರ್ಹ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ

ಪ್ರಮುಖ ಸುದ್ದಿ (ಬೆಂಗಳೂರು) ಮೇ 6 :- ಕರ್ನಾಟಕ ಲೋಕಸೇವಾ ಆಯೋಗವು ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮತ್ತು ಅಧೀಕ್ಷಕರ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಮೇ 16 ರಂದು ಬೆಳಿಗ್ಗೆ 9.30 ಗಂಟೆಗೆ ಆಯೋಗದ ಕೇಂದ್ರ, ಬೆಂಗಳೂರು ಇಲ್ಲಿ ನಡೆಸಲಿದೆ.

ಅರ್ಹ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಆಯೋಗದ  ವೆಬ್‍ಸೈಟ್ http://kpsc.kar.nic.in ರಲ್ಲಿ ಪ್ರಕಟಿಸಲಾಗಿದೆ.  ಅಭ್ಯರ್ಥಿಗಳು ಸೂಚನಾ ಪತ್ರಗಳನ್ನು ಆಯೋಗದ ಅಂತರ್ಜಾಲದಿಂದ ಮೇ 6 ರಿಂದ ಡೌನ್‍ಲೋಡ್ ಮಾಡಿಕೊಳ್ಳುವಂತೆಯು ಹಾಗೂ ಸೂಚನಾ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಹೆಲ್ಪ್ ಲೈನ್ ಸಂಖ್ಯೆ 7337830894 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ.

(ಎನ್.ಬಿ.ಎನ್)

Leave a Reply

comments

Related Articles

error: