ಕರ್ನಾಟಕಪ್ರಮುಖ ಸುದ್ದಿ

ಪರ್ಸೆಂಟೇಜ್ ಜನಕ ಕಾಂಗ್ರೆಸ್ : ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯ(ದಾವಣಗೆರೆ),ನ.26 :- ರಾಜ್ಯದಲ್ಲಿ ಪರ್ಸೆಂಟೆಜ್ ಅನ್ನೋದರ ಜನನವಾಗಿದ್ದೇ ಕಾಂಗ್ರೆಸ್ ನಿಂದ, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಆಗಿರುವ ಟೆಂಡರ್ ಗಳನ್ನು ಕೂಡ ತನಿಖೆಗೆ ಒಳಪಡಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ದಾವಣೆಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯಪಾಲರಿಗೆ ಕಾಂಗ್ರೆಸ್ ನವರು ಕೊಟ್ಟಿರುವ ದೂರನ್ನು ನೋಡಿದರೆ ಅದು ಹಾಸ್ಯಾಸ್ಪದ ಅನಿಸುತ್ತದೆ. ಆದರೆ ಪರ್ಸೆಂಟೇಜ್ ಅನ್ನುವುದರ ಜನನವೇ ಕಾಂಗ್ರೆಸ್ ನಿಂದ , ಅವರು ದೂರು ಕೊಟ್ಟಿರುವ ಪತ್ರದಲ್ಲಿ ಯಾವುದೇ ಸ್ಪಷ್ಟತೆ ಕಾಣುತ್ತಿಲ್ಲ, ಯಾವ ನಿರ್ದಿಷ್ಟ ಕಾಮಗಾರಿಯ ಬಗ್ಗೆಯೂ ಇಲ್ಲ, ಯಾವ ಇಲಾಖೆಯ ಬಗ್ಗೆಯೂ ಇಲ್ಲ. ಆದರೂ ಕೂಡ ಯಾವ ಯಾವ ಇಲಾಖೆಯ ಹೆಸರನ್ನು ಸೂಚಿಸಿದ್ದಾರೋ ಅದರ ಬಗ್ಗೆ ರಾಜ್ಯಪಾಲರು ತನಿಖೆ ಮಾಡಲು ಹೇಳಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸ್ನೇಹಿತರು ಈ ವಿಚಾರದಲ್ಲಿ ಬಹಳ ಆಸಕ್ತಿ ವಹಿಸಿದ್ದರಿಂದ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಆಗಿರುವ ಟೆಂಡರ್ ಗಳನ್ನು ಕೂಡ ಈ ತನಿಖೆಗೆ ಒಳಪಡಿಸುತ್ತೇವೆ ಎಂದು ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: