ಕರ್ನಾಟಕಪ್ರಮುಖ ಸುದ್ದಿ

ಮೀನನ್ನು ನೀರಿನಿಂದ ಹೊರ ತೆಗೆದಾಗ ಆಗುವ ಪರಿಸ್ಥಿತಿ ಡಿಕೆಶಿಯವರದ್ದು : ಸಚಿವ ಬಿ.ಸಿ.ಪಾಟೀಲ್

ರಾಜ್ಯ(ಹಾವೇರಿ),ನ.26 : -ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾನು ಮುಖ್ಯಮಂತ್ರಿಯಾಗಬೇಕು ಅಂತ ಹಗಲುಕನಸು ಕಾಣುತ್ತಿದ್ದಾರೆ. ಮೀನು ನೀರಿನಿಂದ ಹೊರಗೆ ಬಿದ್ದಾಗ ಆಗುವ ಪರಿಸ್ಥಿತಿ ಈಗ ಅವರಿಗಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಂದು ಹಾವೇರಿಯಲ್ಲಿನ ಮಳೆಯಿಂದ ನೆರೆಬಂದು ಹಾನಿಯಾಗಿರುವ ಪ್ರದೇಶಗಳ ಸಮಿಕ್ಷೆಗೆಂದು ಹೊಗಿದ್ದ ವೇಳೆ ಕೃಷಿ ಮಾಧ್ಯಮದೊಂದಿಗೆ ಮಾತನಾಡಿ , ಡಿ.ಕೆ.ಶಿವಕುಮಾರ್ ತಾನು ಮುಖ್ಯಮಂತ್ರಿಯಾಗಬೇಕು ಅಂತ ಹಗಲುಕನಸು ಕಾಣುತ್ತಿದ್ದಾರೆ. ಆದರೆ ಇದು ಮೂರ್ಖತನದ ಪರಮಾವಧಿ , ಜನಪರವಾಗಿರುವ 122 ಸೀಟ್ ಇರುವ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು ಅಂತ ಹೇಳಿದರೆ ನಾವೇನು ಹೇಳುವುದು . ಕಾಂಗ್ರೆಸ್ ನವರು ಹತಾಶರಾಗಿದ್ದಾರೆ, ಮೀನು ನೀರಿನಿಂದ ಹೊರಗೆ ಬಿದ್ದಾಗ ಆಗುವ ಪರಿಸ್ಥಿತಿ ಈಗ ಅವರಿಗಾಗಿದೆ ಎಂದು ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: