ಮೈಸೂರು

ಜಗತ್ತಿನ ಶ್ರೇಷ್ಠ ಸಂವಿಧಾನ ಭಾರತ ಸಂವಿಧಾನ : ಡಾ.ಸುಧಾಕರ ಹೊಸಹಳ್ಳಿ

ಮೈಸೂರು, ನ.26 :- ಶ್ರೀ.ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ‘ ಸಂವಿಧಾನ ದಿನಾಚರಣೆ’ ಯ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಂಡ್ಯ ಪ್ರಾದೇಶಿಕ ನಿರ್ದೇಶಕರಾದ ಡಾ.ಸುಧಾಕರ್ ಹೊಸಹಳ್ಳಿ ಮಾತನಾಡಿ ಸಂವಿಧಾನದ ಅರಿವು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಕೂಡ ಇರಬೇಕು, ಮನುಷ್ಯನ ಬದುಕು ಸಂವಿಧಾನದ ನೀತಿ-ನಿಯಮಗಳಿಗೆ ಒಳಪಟ್ಟಿರುತ್ತದೆ. ಸಂವಿಧಾನದ ನಿಯಮಗಳ ಪುನರ್ ಮನನ ಮಾಡಿಕೊಂಡಾಗ ಮಾತ್ರ ಅದರ ಸರಿಯಾದ ಕಾರ್ಯಾಚರಣೆ ಸಾಧ್ಯವಾಗುತ್ತದೆ. ಸಂವಿಧಾನದ ಬಗ್ಗೆ ಆತ್ಮಾಭಿಮಾನವಿದ್ದರೆ ಸಾಲದು, ಅದರ ಸಂಪೂರ್ಣ ಅರಿವಿರಬೇಕು. ಸಂವಿಧಾನ ಆತ್ಮಾಭಿಮಾನವಾದರೆ ಅದರ ಅಭಿವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್‍ ಅವರು ಎಂದರು.
ಜಗತ್ತಿನ ಅತಿ ದೊಡ್ಡ ಮಹಿಳಾ ಸಂವಿಧಾನವಿರುವುದು ಭಾರತದ ಸಂವಿಧಾನದಲ್ಲಿ. ನಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ, ಕರ್ತವ್ಯಗಳ ಬಗ್ಗೆ ನಮಗೆ ಮೊದಲು ಅರಿವಿದ್ದಾಗ ಮಾತ್ರ ಸಂವಿಧಾನಿಕ ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಬೇಕು. ಯಜುರ್ವೇದದ ಕಾಲದಿಂದಲೇ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಮತ್ತು ವಸತಿ ಸಿಗಲೇಬೇಕೆಂಬ ನಿಯಮವಿತ್ತು. ಮೂಲಭೂತ ಹಕ್ಕುಗಳು, ತುರ್ತು ಘೋಷಣೆಗಳ ಬಗ್ಗೆ ತಿಳಿದಿರಬೇಕು. ಅಂಬೇಡ್ಕರ್‍ ಅವರು ದೂರದೃಷ್ಟಿಯನ್ನು ಹೊಂದಿದವರು. ಸಂವಿಧಾನದ ಪರಾಮರ್ಶೆಯನ್ನು ಮಾಡುವುದರಿಂದ ಸಂವಿಧಾನದ ಶ್ರೇಷ್ಠತೆ ತಿಳಿಯುತ್ತದೆ.
ಸಂವಿಧಾನದ ನಿಯಮಗಳನ್ನು ಅನುಭಾವಿಸಿ ಓದಬೇಕು. ಸಂವಿಧಾನದ ಪೂರ್ಣ ಅರಿವಿದ್ದಾಗ ಪ್ರತಿಯೊಬ್ಬರ ಬದುಕು ಸುರಕ್ಷಿತವಾಗಿರುತ್ತದೆ. ಭಾರತೀಯರ ರಕ್ತದಲ್ಲೇ ಅವರ ಜವಾಬ್ದಾರಿಗಳು ಅಡಕವಾಗಿರುತ್ತದೆ. ಅಂಬೇಡ್ಕರ್‍ ಅವರು ಸಾಮರಸ್ಯದ ಸಂವಿಧಾನವನ್ನು ರಚಿಸಿದ್ದಾರೆ, ಸಂವಿಧಾನದ ಸದಾಶಯಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಸಂವಿಧಾನಕ ನಿಯಮಗಳನ್ನು ಅವಲೋಕಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಿಗೆ ಆಗಮಿಸಿದ್ದಂತಹ ವಕೀಲರಾದ ಭವ್ಯ ಮಾತನಾಡಿ ಉಚಿತ ಶಿಕ್ಷಣವನ್ನು ನೀಡುವ ಮಹತ್ವದ ಕೆಲಸವನ್ನು ತಮ್ಮ ಸಂಸ್ಥೆಯು ನಿರ್ವಹಿಸುತ್ತಿದ್ದು, ಇದರ ಸರ್ವೆಗೆ ಸಹಕಾರ ನೀಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹೆಚ್. ಎ. ಪೂರ್ಣಿಮಾ ಅವರು ಸಂವಿಧಾನದ ಪ್ರತಿಜ್ಞ ವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ರಾದ ಡಾ. ಎಂ. ಶಾರದ ವಹಿಸಿದ್ದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಡಾ.ಜಿ. ಪ್ರಸಾದ್ ಮೂರ್ತಿ , ಸಹಾಯಕ ಪ್ರಾಧ್ಯಾಪಕರಾದ ಹೆಚ್. ಎ ಪೂರ್ಣಿಮಾರವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: