ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಪ್ರೇಕ್ಷಕರ ನಗುವಿನಿಂದ ಸಿನಿಮಾ ಗೆದ್ದಿದೆ ಅಂತ ತಿಳಿಯುತ್ತಿದೆ : ಸಿಂಪಲ್ ಸುನಿ

ರಾಜ್ಯ(ಬೆಂಗಳೂರು),ನ.26 :- ಪ್ರೇಕ್ಷಕರ ನಗುವನ್ನು ನೋಡಿದರೆ ಸಿನಿಮಾ ಗೆದ್ದಿದೆ ಅನ್ನುವ ಖುಷಿ ಇದೆ. ಸಿನಿಮಾ ಮಾಡುವುದರ ಹಿಂದೆ ಇದ್ದ ಕಷ್ಟಗಳೆಲ್ಲವು ಮರೆಯುವ ರೀತಿ ಇದೆ ಎಂದು ಸಖತ್ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಸಿನಿಮಾ ಇಂದು ತೆರೆಕಂಡಿದ್ದು ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಪ್ರೇಕ್ಷರೊಂದಿಗೆ ಸಿನಿಮಾವನ್ನು ನೋಡಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ನಾಯಕ ಗಣೇಶ್, ನಾನು ತುಂಬ ವರ್ಷಗಳ ನಂತರ ಅಭಿಮಾನಿಗಳ ಜೊತೆ ಸಿನಿಮಾವನ್ನು ನೋಡಿದೆ. ನನಗೆ ಈ ಕಥೆ ಮೇಲೆ ಬಹಳ ಪ್ರೀತಿ ಇತ್ತು, ಈ ರೀತಿಯ ಪಾತ್ರ ಮಾಡಬೇಕು ಅಭಿಮಾನಿಗಳಿಗೆ ಬೇರೆ ರೀತಿಯ ಮನರಂಜನೆ ಕೊಡಬೇಕು ಅಂತ , ಅದರ ಜೊತೆಯಲ್ಲಿ ಚಿಕ್ಕ ಸಂದೇಶವನ್ನು ಚಿತ್ರದ ಮೂಲಕ ಹೇಳಿದ್ದೇವೆ , ಇದೆಲ್ಲ ಮಾಡಿದ್ದು ನಮ್ಮ ನಿರ್ದೇಶಕರು ,ತುಂಬ ಖುಷಿಯಾಗಿದೆ ಜನರು ಕೂಡ ಅಷ್ಟೇ ಇಷ್ಟ ಪಡುತ್ತಿದ್ದಾರೆ ಎಂದು ಸಿನಿಮಾ ಗ್ರಾಂಡ್ ಓಪನಿಂಗ್ ಪಡೆದುಕೊಂಡಿರುವುದರ ಸಂತಸವನ್ನು ಹಂಚಿಕೊಂಡಿದ್ದಾರೆ.
ನಂತರ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಕುಟುಂಬದವರೆಲ್ಲರು ಕುಳಿತು ನೋಡೊ ಸಿನಿಮಾ. ಕೊರೊನಾದಿಂದ ಹೊರಬಂದ ಮೇಲೆ ಎಲ್ಲರು ಮನ ತುಂಬಿ ನಗುವುದಕ್ಕಾಗಿ ಮಾಡಿದ್ದು . ಜನರು ಪ್ರತಿಯೊಂದು ದೃಶ್ಯವನ್ನು ಅನುಭವಿಸುತ್ತಿದ್ದ ರೀತಿ ಖುಷಿ ತಂದಿದೆ. ನಾನು ಈ ಸಿನಿಮಾ ಮಾಡುವ ಮೊದಲು ತುಂಬ ಜನ ವಕೀಲರನ್ನು ಭೇಟಿ ಮಾಡಿ ನಂತರ ಕಥೆಯನ್ನು ಮಾಡಿದ್ದು . ಪ್ರೇಕ್ಷಕರ ನಗುವನ್ನು ನೋಡಿದರೆ ಸಿನಿಮಾ ಗೆದ್ದಿದೆ ಅನ್ನುವ ಖುಷಿ ಇದೆ, ಮತ್ತು ಸಿನಿಮಾ ಮಾಡುವುದರ ಹಿಂದೆ ಇದ್ದ ಕಷ್ಟಗಳೆಲ್ಲವು ಮರೆಯುವ ರೀತಿ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: