ಮೈಸೂರು

ಅಂತರ ವಲಯ ಮಟ್ಟದ ಕ್ರೀಡಾ ಕೂಟದ ಪಂದ್ಯಾವಳಿಗೆ ಆಯ್ಕೆ

ಮೈಸೂರು,ನ.26 : – ಅಂತರ ಕಾಲೇಜು ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಜಿ.ಎಸ್.ಎಸ್.ಎಸ್. ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದು ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನ.24 ರಂದು ಮೈಸೂರಿನ ಎನ್.ಐ.ಇ ಕಾಲೇಜಿನಲ್ಲಿ ನಡೆದ ಮೈಸೂರು ವಲಯದ ಮಹಿಳಾ ಅಂತರ ಕಾಲೇಜಿನ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಜಿ.ಎಸ್.ಎಸ್.ಎಸ್. ಮಹಿಳಾ ಇಂಜಿನಿಯರಿಂಗ್ ಕಾಲೇಜು ಮೊದಲ ಸ್ಥಾನವನ್ನು ಪಡೆದು ಗೆಲುವನ್ನು ತಮ್ಮದಾಗಿಸಿಕೊಂಡಿದೆ.
ಈ ಕ್ರೀಡಾ ಕೂಟದಲ್ಲಿ ಎನ್.ಐ.ಇ, ಜಿ.ಎಸ್.ಎಸ್.ಎಸ್, ಎ.ಟಿ.ಎಂ.ಇ, ವಿ.ವಿ.ಸಿ.ಇ, ಎಂ.ಐ.ಟಿ,ಮತ್ತು ವಿ.ಟಿ.ಯು.ಪಿ.ಜಿ ಸೇರಿದಂತೆ ಒಟ್ಟು 7 ಕಾಲೇಜು ಭಾಗವಾಹಿಸಿದ್ದು, ಕೊನೆಯ ಪಂದ್ಯ ಜಿ.ಎಸ್.ಎಸ್.ಎಸ್,ಮತ್ತು ವಿ.ವಿ.ಸಿ.ಇ, ಕಾಲೇಜಿನ ನಡುವೆ ನಡೆದಿದ್ದು ಜಿ.ಎಸ್.ಎಸ್.ಎಸ್ ಕಾಲೇಜು ಜಯವನ್ನು ಸಾಧಿಸುವ ಮೂಲಕ ನ.27 ರಂದು ಬೆಂಗಳೂರಿನಲ್ಲಿ ನಡೆಯುವ ವಿ.ಟಿ.ಯು ಅಂತರ ವಲಯ ಮಟ್ಟದ ಕ್ರೀಡಾ ಕೂಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ . ಗೆಲುವಿಗೆ ಕಾಲೇಜಿನ ಪ್ರಾಚಾರ್ಯರು ಮತ್ತು ಭೋದಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: