ಕರ್ನಾಟಕಪ್ರಮುಖ ಸುದ್ದಿ

ಕೋವಿಡ್-19 ಲಸಿಕೆ; ಬಾಕಿ ಉಳಿದಿರುವ ಮೊದಲ ಡೋಸ್ ನೀಡಿಕೆಗೆ ಕೇಂದ್ರಿಕರಿಸಿ: ಜಿಲ್ಲಾಧಿಕಾರಿ ಎಸ್.ಅಶ್ವತಿ

ರಾಜ್ಯ(ಮಂಡ್ಯ).ನ 27 :- ಜಿಲ್ಲೆಯಲ್ಲಿ ಕೋವಿಡ್ -19 ಲಸಿಕೆ ನೀಡುವ ಸಂಬಂಧ ಬಾಕಿ ಉಳಿದಿರುವ ಮೊದಲ ಡೋಸ್ ಮತ್ತು ಎರಡನೇ ಡೋಸ್ ನೀಡಿಕೆಯನ್ನು ಕೇಂದ್ರಿಕರಿಸಿ ಲಸಿಕಾಕರಣವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಲಸಿಕೆ ನೀಡುವ ಸಂಬಂಧ ಜಿಲ್ಲೆಯ ವಿವಿಧ ತಾಲ್ಲೂಕಿನ ಅಧಿಕಾರಿಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶೇ 3 ರಷ್ಟು ಮೊದಲ ಡೋಸ್ ನೀಡಿಕೆ ಬಾಕಿ ಇದ್ದು, ಜಿಲ್ಲೆಯಲ್ಲಿ ಡಿಸೆಂಬರ್ 01 ರಂದು ಮೆಗಾಮೇಳವನ್ನು ಆಯೋಜಿಸುತ್ತಿದ್ದು ಲಸಿಕಾಕರಣವನ್ನು ಹೆಚ್ಚು ಮಾಡಿ ಎಂದರು.

ಕಳೆದ ಮೆಗಾ ಮೇಳದಲ್ಲಿ ಲಸಿಕಾಕರಣದಲ್ಲಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಆರೋಗ್ಯಾಧಿಕಾರಿಗಳಿಗೆ, ತಹಶೀಲ್ದಾರರುಗಳಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಲಸಿಕೆ ನೀಡಿಕೆಯನ್ನು ಗ್ರಾಮವಾರು, ವಾರ್ಡ್ ವಾರು ಪಟ್ಟಿ ಮಾಡಿ, ಮೊದಲ ಡೋಸ್ ಮತ್ತು ಎರಡನೇ ಡೋಸ್ ನ್ನು ನೀಡಲು ಕ್ರಮವಹಿಸಿ ಎಂದರು.

ಮೊದಲ ಡೋಸ್ ಪಡೆಯದೇ ಇರುವವರನ್ನು ಗುರುತಿಸಿ ಅವರಿಗೆ ಕರೋನಾದ ಬಗ್ಗೆ ಎಚ್ಚರವಹಿಸಿ, ಜಾಗೃತಿ ನೀಡಿ, ಆರೋಗ್ಯ ದೃಷ್ಟಿಯಿಂದ ಲಸಿಕೆ ಅವಶ್ಯಕವೆಂದು ಮನವರಿಕೆ ಮಾಡಿ ಲಸಿಕೆ ನೀಡಿ ಎಂದರು‌.

ತಹಶೀಲ್ದಾರ್, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮವಾರು ಲಸಿಕೆ ನೀಡಿಕೆ ಸಂಬಂಧ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು ಮನೆ ಮನೆಗೆ ತೆರಳಿ ಮೊದಲ ಡೋಸ್ ಪಡೆಯದವರನ್ನು ಕೇಂದ್ರಿಕರಿಸಿ ಲಸಿಕೆ ನೀಡಿ ಎಂದರು.

ಶಾಲಾ ಮಕ್ಕಳ ಪೋಷಕರಿಗೆ, ಅವರ ಕುಟುಂಬದವರು ಲಸಿಕೆ ನೀಡಿಕೆ ಬಗ್ಗೆ ಪರೀಕ್ಷಿಸಿ ಬಾಕಿ ಉಳಿದಿರುವವರನ್ನು ಗುರುತಿಸಿ ಲಸಿಕೆ ನೀಡಿ ಎಂದರು.

ಡಿಸೆಂಬರ್ 01 ರ ಮೆಗಾಮೇಳಕ್ಕೆ ಒಂದು ಮತ್ತು ಎರಡನೇ ಡೋಸ್ ಲಸಿಕೆ ನೀಡಲು ಮೊಬೈಲ್ ಟೀಮ್ ಗಳನ್ನು ಬಲಪಡಿಸಿ,
ಪ್ರತಿ ತಾಲ್ಲೂಕಿಗೆ ಲಸಿಕೆ ನೀಡುವ ಸಂಬಂಧ ಕ್ರಿಯಾಯೋಜನೆ ತಯಾರಿಸಿ ವ್ಯಾಕ್ಸಿನೇಟರ್ಸ್ ಗಳು, ವೈದ್ಯಕೀಯ ಪರಿಕರಗಳು, ಸಿಬ್ಬಂದಿಗಳ ಬಗ್ಗೆ ಮಾಹಿತಿ ನೀಡಿ ಅವಶ್ಯಕತೆ ಇರುವ ಸಿಬ್ಬಂದಿಗಳ ಒದಗಿಸುವಲ್ಲಿ ನಾವು ಕ್ರಮಕೈಗೊಳ್ಳುತ್ತೇವೆ ಎಂದರು.

ಸಭೆಯಲ್ಲಿ ಜಿ.ಪಂ ಸಿಇಒ ದಿವ್ಯಪ್ರಭು, ಜಿಲ್ಲಾ ಆರ್.ಸಿ‌.ಎಚ್ ಅಧಿಕಾರಿ ಡಾ.ಸೋಮಶೇಖರ್, ಜಂಟಿ ಕೃಷಿ ನಿರ್ದೇಶಕರಾದ ಬಿ.ಎಸ್ ಚಂದ್ರಶೇಖರ್, ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜುಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: