ಮೈಸೂರು

ಎಂ.ಎಂ.ಕೆ-ಎಸ್ ಡಿ ಎಂ ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ

ಮೈಸೂರು, ನ.26:- ನಗರದ ಎಂ.ಎಂ.ಕೆ.ಮತ್ತು ಎಸ್.ಡಿ.ಎಂ.ಮಹಿಳಾ ಮಹಾ ವಿದ್ಯಾಲಯದ ಎನ್.ಎಸ್.ಎಸ್.ಘಟಕದ ವತಿಯಿಂದ ಸಂವಿಧಾನ ದಿನಾಚರಣೆ ಪ್ರತಿಜ್ಞಾ ವಿಧಿಯ ಕಾರ್ಯಕ್ರಮ  ಆಯೋಜಿಸಲಾಗಿತ್ತು.

ಕಾಲೇಜಿನ  ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗೆಮಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ  ಇಂದಿನ ಯುವ ಜನತೆ ಸಂವಿಧಾನದ ಮಹತ್ವವನ್ನು ಅರಿತು ಅದಕ್ಕೆ ಗೌರವ ನೀಡುವುದರೊಂದಿಗೆ ನಮಗೆ ದೊರೆತಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಭಾರತ ದೇಶ ಮಾತ್ರ ವಿಶ್ವದಲ್ಲಿಯೇ ಹಲವು ಧರ್ಮ ಆಚಾರ ವಿಚಾರ, ವರ್ಣ ಭಾಷೆಯಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಬಹು ಸಂಸ್ಕೃತಿಯನ್ನು ಹೊಂದಿದ್ದು ನಾವೆಲ್ಲರೂ ಇಂದು ಸಹಬಾಳ್ವೆಯಿಂದ ಬದುಕುತ್ತಿದ್ದೇವೆ ಎಂದರೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಇಂದು ಸಮಾನವಾದ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವುದಕ್ಕೆ ಸಂವಿಧಾನವೇ ಕಾರಣವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಶ್ರೇಷ್ಠ ವಾದ  ಸಂವಿಧಾನವನ್ನು ಭಾರತಕ್ಕೆ ನೀಡಿದ್ದಾರೆ. ಇಂದು ಸಮಾನತೆ, ಸಾಮರಸ್ಯ, ಸಹಬಾಳ್ವೆ ನಮ್ಮಲ್ಲಿರಲು ಸಂವಿಧಾನವೇ ಮೂಲ ಕಾರಣವಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿನಿಯರಿಂದಲೇ ಸಂವಿಧಾನದ ಪೀಠಿಕೆಯ ಭಾಗವನ್ನು ಬೋಧಿಸುವ ಮೂಲಕ ಸಂವಿಧಾನ ಮಹತ್ವವನ್ನು ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್.ಅಧಿಕಾರಿ .ಬಿ.ಎನ್.ಮಾರುತಿ ಪ್ರಸನ್ನ ಮತ್ತು ಸುಮಾರು 125 ಮಂದಿ ಎನ್.ಎಸ್.ಎಸ್ ಸ್ವಯಂಸೇವಕಿಯರು ಭಾಗವಹಿಸಿದ್ದರು.

 

Leave a Reply

comments

Related Articles

error: