ಮೈಸೂರು

ನಂಜನಗೂಡಿನ ಲ್ಲೊಂದು ಅಮಾನವೀಯ ಘಟನೆ : ವ್ಯಕ್ತಿ ಮತ್ತು ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ

ಮೈಸೂರು,ನ.27:- ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ವಿದ್ಯುತ್ ಕಂಬಕ್ಕೆ ರಾತ್ರಿಯಿಡೀ ಕಟ್ಟಿಹಾಕಿ ಥಳಿಸಿರುವ ಘಟನೆ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ನಡೆದಿದೆ.
ವಿವಾಹಿತ ಮಹಿಳೆ ಮತ್ತಾಕೆಯ ಪ್ರಿಯಕರ ವಿಷ್ಣು ಎಂಬವರೇ ಥಳಿತಕ್ಕೊಳಗಾದವರು. ಗ್ರಾಮದ ಮುಖಂಡರು ಶುಕ್ರವಾರ ಬೆಳಿಗ್ಗೆ ಇಬ್ಬರನ್ನು ಬಿಡಿಸಿ, ಸಿದ್ದಪ್ಪಾಜಿ ದೇವಾಲಯ ದಲ್ಲಿ ಇರಿಸಿದ್ದರು ಎನ್ನಲಾಗಿದೆ. ಸಿಬ್ಬಂದಿ ಸ್ಥಳಕ್ಕೆ ತೆರಳಿ ಇಬ್ಬರನ್ನು ರಕ್ಷಿಸಿ ಪೊಲೀಸ್ ತಾಣೆಗೆ ಕರೆತಂದರು. ಮಹಿಳೆ ಐದು ವರ್ಷಗಳ ಹಿಂದೆ ಗಂಡನಿಂದ ಬೇರೆಯಾಗಿ ಅದೇ ಗ್ರಾಮದ ತಾಯಿಯ ಮನೆಯಲ್ಲಿದ್ದರು. ಮಹಿಳೆಯ ತಂದೆ, ತಾಯಿ ಕಾಫಿ ತೋಟದಲ್ಲಿ ಕೆಲಸ ಮಾಡಲು ತೆರಳಿದ್ದರು ಎನ್ನಲಾಗಿದೆ. ‘ನನ್ನ ಗಂಡ ಹಾಗೂ ಮೈದುನ ಕಂಬಕ್ಕೆ ಕಟ್ಟಿಸಿ ಥಳಿಸಿದ್ದಾರೆ’ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.ಈ ಕುರಿತು ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಲಕ್ಷ್ಮೀಕಾಂತ್ ತಳವಾರ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: