ಮೈಸೂರು

ವರುಣಾ ಸಮೀಪದ ಎಂ.ಬಿ.ಹಳ್ಳಿಯಲ್ಲಿ ಚಿರತೆ ಸೆರೆ

ಮೈಸೂರು, ನ.27:- ವರುಣಾ ಸಮೀಪದ ಎಂ.ಬಿ.ಹಳ್ಳಿಯಲ್ಲಿನ ವ್ಯಕ್ತಿ ಯೋರ್ವರ ತೋಟದ ಬಳಿ ಚಿರತೆ ಬೋನಿಗೆ ಬಿದ್ದಿದೆ.
ನಾಗೇಂದ್ರ ಎಂಬವರ ತೋಟದ ಬಳಿ ನಿನ್ನೆ ಚಿರತೆ ಬೋನಿಗೆ ಬಿದ್ದಿದೆ.  ಈ ಭಾಗದಲ್ಲಿ ಕೆಲವು ದಿನಗಳಿಂದ ಚಿರತೆ ಓಡಾಡುವುದನ್ನು ಗಮನಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಚಿರತೆ ಹಿಡಿಯುವಂತೆ ದೂರು ನೀಡಿದ್ದರು. ಸೆರೆ ಸಿಕ್ಕ ಚಿರತೆ ಸುಮಾರು ಐದು ವರ್ಷದ ಗಂಡು ಚಿರತೆ ಎನ್ನಲಾಗಿದೆ. ಪಶು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ನಾಗರಹೊಳೆ ಅರಣ್ಯಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾಹಿತಿ ನೀಡಿದ್ದಾರೆ.

ಅರಣ್ಯ ರಕ್ಷಕರಾದ ಪಾಪನಾಯ್ಕ, ಪಿ.ಎನ್.ಜಗದೀಶ್, ಎಂ.ಜಗದೀಶ್, ಶ್ರೀನಿವಾಸ್, ರವಿ, ಗಣೇಶ್‌ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: