ಮೈಸೂರು

ಕೆ.ಆರ್.ಆಸ್ಪತ್ರೆಯ ಸೆಂಟ್ರಲ್ ಲ್ಯಾಬೋರೇಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್  

ಮೈಸೂರು,ನ.27 :- ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ನೀರು ಸೋರಿಕೆಯಾದ ಪರಿಣಾಮ ಮೈಸೂರಿನ ಕೆ.ಆರ್.ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಸೆಂಟ್ರಲ್ ಲ್ಯಾಬೋರೇಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರುವ ಘಟನೆ ನಡೆದಿದೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮೈಕ್ರೋಬಯಾಲಜಿ ವಿಭಾಗದ ಪ್ರಯೋಗಾಲವಿರುವ ಕಟ್ಟಡದಲ್ಲಿ ಮಳೆ ನೀರು ಸೋರಿಕೆಯಾಗಿ ಗೋಡೆಗಳೆಲ್ಲಾ ಶೀತಮಯವಾದ ಕಾರಣ, ಮಂಗಳವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಹಿನ್ನಲೆಯಲ್ಲಿ ಆರ್ ಟಿ – ಪಿಸಿಆರ್ ಟೆಸ್ಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಅಂಡ್ ಡೈರೆಕ್ಟರ್ ಡಾ.ಸಿ.ಪಿ. ನಂಜರಾಜ್ ತಿಳಿಸಿದ್ದಾರೆ.

ಆರ್ ಟಿ – ಪಿಸಿಆರ್ ಟೆಸ್ಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುವ ಕಾರಣ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸಂಗ್ರಹಿಸಲಾಗುತ್ತಿರುವ ಸ್ಯಾಂಪಲ್ ಗಳನ್ನು ತಾತ್ಕಾಲಿಕವಾಗಿ ಸಿ.ಎಫ್.ಟಿ.ಆರ್.ಐ ಪ್ರಯೋಗಾಲಯದಲ್ಲಿ ಟೆಸ್ಟ್ ಮಾಡಿ ಫಲಿತಾಂಶ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೆ.ಆರ್.ಆಸ್ಪತ್ರೆಯ ಬಹುತೇಕ ಕಟ್ಟಡಗಳು ಹಳೆಯದಾಗಿರುವುದರಿಂದ ಶಿಥಿಲಾವಸ್ಥೆಯಲ್ಲಿವೆ. ಪರಿಣಾಮ ಇತ್ತೀಚೆಗೆ ಸುರಿದ  ನಿರಂತರ ಮಳೆಯಿಂದ ತಾರಸಿಯಿಂದ ನೀರು ಜಿನುಗಿ ಗೋಡೆಗಳು ತೇವವಾಗುತ್ತಿವೆ. ಆದ್ದರಿಂದ ನೆಲದಲ್ಲಿ ನೀರು ನಿಲ್ಲುತ್ತಿರುವುದು ಸಹ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಲು ಕಾರಣವಾಗುತ್ತಿವೆ ಎಂದು ತಿಳಿಸಿದರು. ಕಟ್ಟಡಗಳ ಸೋರಿಕೆ ತಡೆಗಟ್ಟಲು ರಿಪೇರಿ ಕೆಲಸ ಆರಂಭವಾಗಬೇಕಿದೆ, ಆದರೆ ಮಳೆ ಸಂಪೂರ್ಣವಾಗಿ ನಿಲ್ಲುವವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಇಂಜಿನಿಯರ್ ಗಳು ಹೇಳುತ್ತಿದ್ದಾರೆ. ತುರ್ತಾಗಿ ಲ್ಯಾಬೋರೇಟರಿ ಇರುವ ಮೈಕ್ರೋಬಯಾಲಜಿ ವಿಭಾಗದ ಕಟ್ಟಡದಲ್ಲಿ ನೀರು ಸೋರಿಕೆ ತಡೆಯಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು   ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: