ಮನರಂಜನೆ

ಚಳಿಗಾಲದಲ್ಲಿ ಶ್ವಾಸ ಸಂಬಂಧಿ ಕಾಯಿಲೆಗೆ ಪರಿಹಾರ ಹೇಳಿದ ನಟಿ ಸೋಹಾ ಅಲಿಖಾನ್

ದೇಶ(ಮುಂಬೈ),ನ.27 : – ಸುಪ್ರಸಿದ್ಧ ಬಾಲಿವುಡ್ ಸೆಲೆಬ್ರಿಟಿ ಸೋಹಾ ಅಲಿಖಾನ್ ಸರಿಯಾದ ಆಹಾರ ಸೇವನೆ , ದೀರ್ಘ ಉಸಿರಾಟದ ವ್ಯಾಯಾಮ, ಯೋಗ ಮತ್ತು ಕೆಮ್ಮು ನೆಗಡಿಯಿಂದ ಪರಿಹಾರ ಪಡೆದುಕೊಳ್ಳಲು ವಿಕ್ಸ್ ವೇಪೋರಬ್ ನೊಂದಿಗಿನ ಸ್ಟೀಮ್ ಇನ್ಹ್ ಲೇಶನ್ ಮೂಲಕ ತನ್ನ ಕುಟುಂಬವು ತಮ್ಮ ಶ್ವಾಸ ಸಂಬಂಧಿತ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಕಾಳಜಿ ವಹಿಸುತ್ತಾರೆ ಎಂಬುದನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡಿದ ಸೋಹಾ ಅಲಿಖಾನ್ ಪಟೌಡಿ ರಾಜಮನೆತನದ ಕುಟುಂಬದಿಂದ ಬಂದ ನಾನು ಸಾಂಪ್ರದಾಯಿಕ ಸಾಮಗ್ರಿಗಳು ಮತ್ತು ಯೋಗಾಭ್ಯಾಸದಿಂದ ಪರಿಹಾರ ಕಂಡುಕೊಳ್ಳುವುದರಲ್ಲಿ ನಂಬಿಕೆ ಜಾಸ್ತಿ ಇರಿಸಿದ್ದೇನೆ. ನವೆಂಬರ್ ತಿಂಗಳು ಬಹಳ ವಿಚಿತ್ರವಾದ ತಿಂಗಳಾಗಿದ್ದು ಬದಲಾಗುವ ಹವಾಮಾನವನ್ನು ಯಾರೂ ಊಹಿಸಲಾಗುವುದಿಲ್ಲ.
ಹವಾಮಾನದ ತಕ್ಷಣದ ಬದಲಾವಣೆಗಳಿಗೆ ಹೊಂದಿಕೊಳ್ಳಲು ನನ್ನ ದೇಹಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುವುದರಿಂದ , ವರ್ಷದ ಈ ಸಮಯದಲ್ಲಿ ನನಗೆ ಬಹಳ ಬೇಗನೇ ನೆಗಡಿಯಾಗುತ್ತದೆ. ಅಷ್ಟೇ ಅಲ್ಲದೆ, ಮನೆಯಲ್ಲೂ ಅನೇಕ ವಿಶೇಷ ದಿನಗಳಿರುವ ಕಾಲ ಇದಾಗಿದ್ದು, ನನ್ನ ಕುಟುಂಬದೊಡನೆ ಗುಣಮಟ್ಟದ ಸಮಯ ಕಳೆಯಬೇಕೆಂದು ನಾನು ಬಯಸುತ್ತೇನೆ , ಆದ್ದರಿಂದ ಕಾಯಿಲೆ ಬರದಂತೆ ನೋಡಿಕೊಳ್ಳಲು , ನಾನು ನನ್ನ ಅಮ್ಮನಿಂದ ಕೆಲವು ಉಪಾಯಗಳನ್ನು ಕಲಿತಿದ್ದೇನೆ, ಅದಕ್ಕಾಗಿ ಮನೆಯಲ್ಲಿನ ಔಷಧೋಪಚಾರಗಳನ್ನೇ ನಾನು ಅನುಸರಿಸುತ್ತಾ ಬಂದಿದ್ದೇನೆ, ನೀಲಗಿರಿ , ಕರ್ಪೂರ ಮತ್ತು ಮೆಂಥಾಲ್ ನಂತಹ ನೈಸರ್ಗಿಕ ವಸ್ತುಗಳಿರುವ ವಿಕ್ಸ್ ವೇಪೋರಬ್ ನೊಂದಿಗೆ ಸ್ಟೀಮ್ ಇನ್ಹ್ ಲೇಶನ್ ತೆಗೆದುಕೊಳ್ಳುವುದನ್ನು ಒಳಗೊಂಡಿದೆ. ಇದರಿಂದ ನನಗೆ ಶೀಘ್ರವಾಗಿ ಕೆಮ್ಮು ಮತ್ತು ನೆಗಡಿಯಿಂದ ಪರಿಹಾರ ದೊರಕುತ್ತದೆ ಎಂದಿದ್ದಾರೆ.
ವಿಕ್ಸ್ ವೇಪೋರಬ್ ನೊಂದಿಗೆ ಸ್ಟೀಮ್ ಇನ್ಹ್ ಲೇಶನ್, ವಯಸ್ಕರು ಹಾಗೂ ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಬಳಸಲು ಸುರಕ್ಷಿತವಾಗಿದೆ, ಆದಾಗ್ಯೂ, ಲಕ್ಷಣಗಳು ಮುಂದುವರಿದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದು ತಿಳಿಸಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: