ಕರ್ನಾಟಕಪ್ರಮುಖ ಸುದ್ದಿಮನರಂಜನೆಮೈಸೂರು

ಅಪ್ಪು ಇಲ್ಲ ಅನ್ನೋ ನೋವು ಕಡಿಮೆ ಆಗಲ್ಲ : ನಟ ಶಿವರಾಜ್ ಕುಮಾರ್

ಮೈಸೂರು,ನ.27 :- ಅಪ್ಪು ಇಲ್ಲ ಅನ್ನುವ ಮಾನಸಿಕ ನೋವು ಕಡಿಮೆಯಾಗಲ್ಲ, ಆಗುವುದಿಲ್ಲ ನೋವು ಕೊನೆಯವರೆಗೂ ಶಾಶ್ವತವಾಗಿ ಇದ್ದೇ ಇರುತ್ತದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ನಿನ್ನೆ ಮೈಸೂರಿಗೆ ಭೇಟಿ ನೀಡಿದ ವೇಳೆ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಅಪ್ಪುವಿನದು ಒಂದು ಒಳ್ಳೆಯ ಆತ್ಮ. ಯಾವುದೇ ರೀತಿಯ ಪ್ರಚಾರ ಬೇಕಿಲ್ಲ. ಅವನು ಪರಿಶುದ್ಧವಾದ ಆತ್ಮ.ಅಪ್ಪಾಜಿ ಹೇಳಿಕೊಟ್ಟಿರುವ ಮಾರ್ಗದಲ್ಲಿ ನಡೆದು ನಮ್ಮೆಲ್ಲರಿಗೂ ಮಾದರಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಭಜರಂಗಿ-2 ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಭಜರಂಗಿ-2 ಸಿನಿಮಾದಲ್ಲಿ ಅಪ್ಪು ನಂಟು ಹೆಚ್ಚಾಗಿದೆ. ಯಾಕೆಂದರೆ ಅಪ್ಪು ಕೊನೆಯ ಕಾರ್ಯಕ್ರಮ ಭಜರಂಗಿ-2 ಸಿನಿಮಾದ ಫ್ರಿ ರಿಲೀಸ್ ಕಾರ್ಯಕ್ರಮವಾಗಿತ್ತು. ಆದರೆ ನಮಗೆ ತಿಳಿದಿರಲಿಲ್ಲ ಸಿನಿಮಾ ರಿಲೀಸ್ ದಿನವೇ ಈ ರೀತಿ ಕೆಟ್ಟ ಘಟನೆ ಸಂಭವಿಸುತ್ತದೆ ಅಂತ , ಅಲ್ಲದೆ ಅಪ್ಪು ಹುಟ್ಟಿದಾಗ ನನಗೆ 13 ವರ್ಷ. ನಾನು ಆಗಿನಿಂದಾನು ನನ್ನ ಮಗನ ಹಾಗೇ ನೋಡಿಕೊಂಡಿದ್ದೇನೆ ಎಂದು ಕಳೆದ ದಿನಗಳನ್ನು ಸ್ಮರಿಸುತ್ತ ಭಾವುಕರಾದರು. ಅಪ್ಪು ಇಲ್ಲ ಅನ್ನೋ ಮಾನಸಿಕ ನೋವು ಕಡಿಮೆಯಾಗಲ್ಲ. ಆಗುವುದೂ ಇಲ್ಲ. ನೋವು ಕೊನೆಯವರೆಗೂ ಶಾಶ್ವಾತವಾಗಿ ಇದ್ದೇ ಇರುತ್ತದೆ ಅದರೊಂದಿಗೆ ನಾವು ಜೀವಿಸಬೇಕೆಂದು ಹೇಳಿದ್ದಾರೆ.
ರಾಜಮೌಳಿ ಯವರು ಅಪ್ಪು ನಿವಾಸಕ್ಕೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿರುವುದರ ಕುರಿತು ಪ್ರತಿಕ್ರಿಯಿಸಿ ಇಡೀ ಭಾರತ ಚಿತ್ರರಂಗವೇ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಆದರೂ ಅಪ್ಪು ಇಲ್ಲ ಎನ್ನುವ ನೋವು ನಮ್ಮಲ್ಲಿ ಸದಾ ಇರುತ್ತದೆ ಎಂದಿದ್ದಾರೆ. ಪುನೀತ್ ಅವರ ಕೊನೆಯ ಜೇಮ್ಸ್ ಚಿತ್ರದ ಬಗ್ಗೆ ಕುರಿತು ಪ್ರತಿಕ್ರಿಯಿಸಿ ಅಪ್ಪುಗೆ ವಾಯ್ಸ್ ಕೊಡಲು ನನ್ನನ್ನು ಕೇಳಿದ್ದರು. ಆದರೆ ನಾನು ಬೇರೆ ಯಾರದಾದರೂ ನೋಡಿ ಅಂತ ಹೇಳಿದ್ದೇನೆ , ಚಿತ್ರ ತಂಡ ಏನಾದರೂ ನನ್ನ ಧ್ವನಿಯೇ ಬೇಕು ಅಂತ ಹೇಳಿದರೆ ಖಂಡಿತವಾಗಿಯೂ ನಾನು ಹೃದಯ ತುಂಬಿ ಆ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ.
ಅಪ್ಪು ನಡೆಸುತ್ತಿದ್ದ ಶಕ್ತಿಧಾಮ, ಮುಂತಾದ ಸಮಾಜ ಸೇವೆ ಕೆಲಸಗಳನ್ನು ನಾವು ಮುಂದುವರಿಸುವ ನಿಟ್ಟಿನಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಯಾರಿಗೆ ಆ ಜವಾಬ್ದಾರಿಯನ್ನು ಕೊಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಶಕ್ತಿ ಧಾಮಕ್ಕೂ ಭೇಟಿ ನೀಡಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: