ಕರ್ನಾಟಕಪ್ರಮುಖ ಸುದ್ದಿ

ಸ್ಪರ್ಧಿಸದ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ಕೋರಿದ್ದೇನೆ ಎಂದ್ರು ಬಿಎಸ್ ವೈ

ರಾಜ್ಯ(ಬೆಂಗಳೂರು),ನ.27 :- ಜೆಡಿಎಸ್ ನವರ ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿಲ್ಲವೋ ಅಲ್ಲಿ ನಮಗೆ ಬೆಂಬಲವನ್ನು ನೀಡಿ ಎಂದು ನಾನೇ ಜೆಡಿಎಸ್ ನವರನ್ನು ಸಂಪರ್ಕಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯ ಪ್ರವಾಸದೊಂದಿಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಇರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನಾಳೆ ಸಾಗರ, ಸೊರಬ ಕ್ಷೇತ್ರಗಳ ಕಡೆ ಪ್ರಚಾರಕ್ಕೆ ಹೋಗುತ್ತೇನೆ, ಮತ್ತು ಹೊನ್ನಳ್ಳಿ ಕೂಡ ಹೋಗುತ್ತೇನೆ , ನಮ್ಮ ಅಪೇಕ್ಷೇ ಇರುವುದು ನಮ್ಮ ಅಭ್ಯರ್ಥಿಗಳನ್ನು ಮೊದಲ ಸುತ್ತಿನಲ್ಲೇ ಗೆಲ್ಲಿಸಬೇಕು ಅಂತ. ಅದಕ್ಕೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತವೆ, ನಾವು 25 ಸ್ಥಾನಗಳಲ್ಲಿ 20 ಸ್ಥಾನಗಳಿಗೆ ಸ್ಪರ್ಧಿಸಿದ್ದೇವೆ, 15 ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಿದರೆ ನಮಗೆ ಬಹುಮತ ಬರುತ್ತದೆ ನಾವು ಯಾರ ಮೇಲೂ ಅವಲಂಬಿತರಾಗುವ ಅಗತ್ಯವಿಲ್ಲ ,ನಾವು 15 ಕ್ಷೇತ್ರಗಳಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇನ್ನೂ ಜೆಡಿಎಸ್ ನವರ ಬೆಂಬಲವನ್ನು ಯಡಿಯೂರಪ್ಪ ಕೇಳಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಪ್ರತಿಕ್ರಿಯಿಸಿ, ಜೆಡಿಎಸ್ ನವರ ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿಲ್ಲ. ಅಲ್ಲಿ ನಮಗೆ ಬೆಂಬಲವನ್ನು ನೀಡಿ ಎಂದು ನಾನೇ ಜೆಡಿಎಸ್ ನವರನ್ನು ಸಂಪರ್ಕಿಸಿದ್ದೇನೆ , ಅದಕ್ಕೆ ಅವರು ಇಂದು ಅಥವಾ ನಾಳೆ ಅವರ ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಿದ್ದಾರೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: