ಮೈಸೂರು

ಕನ್ನಡ, ಕರ್ನಾಟಕ, ಕನ್ನಡಿಗರ ಸಾಧನೆ ಅಪಾರ : ಎಸ್.ಆರ್. ಸ್ವಾಮಿ

ಮೈಸೂರು, ನ.27:- ಕನ್ನಡ, ಕರ್ನಾಟಕ, ಕನ್ನಡಿಗರ ಸಾಧನೆ ಅಪಾರವಾದುದು ಎಂದು ರೋಟರಿ ವಲಯ-7ರ ಸಹಾಯಕ ಗೌರ್ನರ್ ಎಸ್.ಆರ್. ಸ್ವಾಮಿ ಹೇಳಿದರು.
ರೋಟರಿ ಜಯಪ್ರಕಾಶ್ ನಗರದ ಪುಟ್ಟರಾಜ ಗವಾಯಿ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ  ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರು ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ಮಾಡಿದ್ದಾರೆ. ವಿಶ್ವದ ಮೂಲೆಮೂಲೆಗಳಲ್ಲೂ ನೆಲೆಸಿದ್ದಾರೆ. ಇದರಿಂದಾಗಿಯೇ ಕರ್ನಾಟಕ್ಕೆ ಹೆಸರು ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರೋಟರಿ ಜಯಪ್ರಕಾಶ್ ನಗರ ನಿಯೋಜಿತ ಅಧ್ಯಕ್ಷ ಡಾ.ಮುಳ್ಳೂರು ನಂಜುಂಡಸ್ವಾಮಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಅಭಿನಂದಿಸಲಾಯಿತು.
ಮುಖ್ಯ ಭಾಷಣಕಾರರಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಅವರು, ಕನ್ನಡ ನಾಡು- ನುಡಿಯ ಮಹತ್ವವನ್ನು ತಿಳಿಸಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ. ಮುಳ್ಳೂರು ನಂಜುಂಡಸ್ವಾಮಿ ಅವರು, ಸ್ವಾತಂತ್ರ್ಯ ಪೂರ್ವದಲ್ಲಿಯೇ ಆಡಳಿತ ನಡೆಸಿದ ಕನ್ನಡೇತರ ರಾಜಮನೆತನಗಳು ಮತ್ತು ಆಂಗ್ಲರು ಅವರ ಆಡಳಿತದಲ್ಲಿ ಕನ್ನಡವನ್ನು ಬಳಸಿದ್ಧಾರೆ.ಟಿಪ್ಪು, ಹೈದರಾಲಿ ಅವರ ಆಡಳಿತದಲ್ಲಿಯುಾ ಶೃಂಗೇರಿ ಮಠಕ್ಕೆ ಕನ್ನಡದಲ್ಲಿ ಪತ್ರ ವ್ಯವಹಾರ ನಡೆಸಿದ್ದಾರೆ. ಆದರೆ ಪ್ರಸ್ತುತದಲ್ಲೂ ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಬಳಕೆ ಆಗದಿರುವುದು ದುರ್ದೈವದ ಸಂಗತಿ ಎಂದರು.
ರೋಟರಿ ಜಯಪ್ರಕಾಶ್ ನಗರ ಅಧ್ಯಕ್ಷ ಕೆ.ಎಸ್. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ. ರವಿಶಂಕರ್ ಸ್ವಾಗತಿಸಿದರು.  ಮಾಜಿ ಅಧ್ಯಕ್ಷ ಚಂದ್ರಶೇಖರ್, ವಲಯ ಸೇನಾನಿ ಡಾ.ಸಿ. ವೆಂಕಟೇಶ್ ಇದ್ದರು. ವೇಣು ನಿರೂಪಿಸಿದರು.  ಅಪೇಕ್ಷಾ ಪ್ರಾರ್ಥಿಸಿದರೆ. ದಕ್ಷಾ ನಂಜುಂಡಸ್ವಾಮಿ, ಜೀವನ್ ನಂಜುಂಡಸ್ವಾಮಿ, ರೊ.ನೀಲಕಂಠ ಮೂರ್ತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಅರಿವಿನ ಮನೆಯ ಮಂಜುಳಾ, ಒಕ್ಕಲಿಗರ ಸಂಘದ ಕೃಷ್ಣ, ವಿಶ್ವಮಾನವ ಡಾ,ರಾಜ್‌ಕುಮಾರ್ ಸಂಘದ ಸೇತುರಾಮ್, ಕನ್ನಡ ಜಾಗೃತಿ ಸಮಿತಿ ಸದಸ್ಯ ಗಿರೀಶ್, ಲಯನ್ಸ್‌ನ ಮದ್ದಾನಸ್ವಾಮಿ, ಪ್ರಕಾಶ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: