ಮೈಸೂರು

ಅಂತರಂಗದ ಚಾರಣ ಕೃತಿ ಬಿಡುಗಡೆ

ಮೈಸೂರು, ನ.27 :-  ಎಸ್ ಎಲ್ ಭೈರಪ್ಪ ಅವರಿಂದ ಮೋಹನ್ ರಂಗರಾವ್ ಅವರ ನೂತನ ಕೃತಿ ‘ ಅಂತರಂಗದ ಚಾರಣ ‘ ಬಿಡುಗಡೆ’ಗೊಂಡಿತು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿರುವ ಅಂತರಂಗದ ಚಾರಣ ಈ ಪುಸ್ತಕ ಪವಿತ್ರ ಕೈಲಾಸದ ಆತ್ಮೀಯತೆಯನ್ನು ಪರಿಶೀಲಿಸುವುದಲ್ಲದೆ , ನಿಸರ್ಗದಲ್ಲಿನ ದೈವತ್ವದ ಶಕ್ತಿಯನ್ನು ಅನುಭವಿಸಲು ಇಚ್ಛಿಸುವ ಪ್ರತಿಯೊಬ್ಬರೂ ತಪ್ಪದೆ ಓದಬೇಕಾದ ಕೃತಿಯಾಗಿದೆ .

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಅಂತರಂಗದ ಚಾರಣ ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು.

ಈ ಕೃತಿ ಕೇವಲ ಪ್ರವಾಸ ಕಥನ ಮಾತ್ರವಲ್ಲದೆ , ನಾವು ಹೊಂದಿರುವ ಪ್ರತಿಯೊಂದು ಮೋಹ ಇಂದಾದ ವಿಮೋಚನೆಯ ನಿರೂಪಣೆಯಾಗಿದೆ .

ಕೈಗಾರಿಕೋದ್ಯಮಿಯಾದ ಆರ್ . ಗುರು , ಪ್ರೊಫೆಸರ್ ಶಂಕರ್ ಬೇಲೂರು, ಡಾ. ಶ್ರೀಧರ್ , ಮೈಸೂರು ಸಾಹಿತ್ಯ ಉತ್ಸವದ ಮೇಲ್ವಿಚಾರಕರು ಮತ್ತು ಅಧ್ಯಕ್ಷರಾದ ಶುಭಾ ಸಂಜಯ್ ಅರಸ್ ಅವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: