ಮೈಸೂರು

ಒಡಹುಟ್ಟಿದ ಅಣ್ಣ ನಿಂದಲೇ ತಂಗಿಯ ಮೇಲೆ ಅತ್ಯಾಚಾರ : ಮೈಸೂರಿನಲ್ಲೊಂದು ಹೇಯ ಕೃತ್ಯ

ಮೈಸೂರು, ನ.28:-ಅಣ್ಣ ತಂಗಿಯ ಸಂಬಂಧ ಎಷ್ಟು ಪವಿತ್ರವಾದದ್ದು. ಆದರೆ ಇಲ್ಲೊಬ್ಬ ಕಾಮುಕ ಅಣ್ಣ ನಿರಂತರವಾಗಿ ತಂಗಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಗರ್ಭಕ್ಕೆ ಕಾರಣ ನಾದ ಹೇಯ ಕೃತ್ಯ  ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ಸ್ವಂತ ತಂಗಿಯ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ಅಣ್ಣ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೈಸೂರಿನ ಗಿರಿದರ್ಶಿನಿ ನಗರದಲ್ಲಿ ಅಮಾನುಷ ಘಟನೆ ನಡೆದಿದೆ. ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿದ ಅಣ್ಣ ವಿನಯ್ ಕುಮಾರ್ ಕಂಬಿ ಎಣಿಸುತ್ತಿದ್ದಾನೆ.

ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನ ಕಳೆದುಕೊಂಡಿದ್ದ 16 ವರ್ಷದ ಅಪ್ರಾಪ್ತೆ ಅಣ್ಣನ ಆಶ್ರಯ ಪಡೆದಿದ್ದಳು.ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರೊಂದಿಗೆ ಬೆಳೆದ ಅಪ್ರಾಪ್ತೆ ಕಾಮುಕ ಅಣ್ಣನ ಕಾಮಪಿಪಾಸೆಗೆ ಬಲಿಯಾಗಿದ್ದಾಳೆ.ಅಕ್ಕಂದಿರಿಗೆ ವಿವಾಹವಾದ ಕಾರಣ ಇಬ್ಬರು ಅಣ್ಣಂದಿರ ಜೊತೆ ಆಶ್ರಯ ಪಡೆದಿದ್ದಳು. ಕುಡಿತದ ಚಟಕ್ಕೆ ಬಲಿಯಾಗಿದ್ದ  ಅಣ್ಣ ವಿನಯ್ ಕುಮಾರ್ ಪಾನಮತ್ತನಾಗಿ ಸ್ವಂತ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಳೆದ ಮೂರು ತಿಂಗಳಿಂದ ಅತ್ಯಾಚಾರವೆಸಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಕಾಮಪಿಶಾಚಿ ಅಣ್ಣನ ಕೃತ್ಯಕ್ಕೆ ಅಮಾಯಕ ತಂಗಿ ಗರ್ಭಿಣಿಯಾಗಿದ್ದಾಳೆ. ನಿನ್ನೆ ಘಟನೆ ಬೆಳಕಿಗೆ ಬಂದಿದ್ದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಮುಕ ಅಣ್ಣನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಅಪ್ರಾಪ್ತೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. (ಕೆ.ಎಸ್,ಎಸ್. ಎಚ್)

Leave a Reply

comments

Related Articles

error: