ಮೈಸೂರು

ಮೃತ ಮಹಿಳೆಯ ಹೆಬ್ಬೆಟ್ಟು ಸಹಿ ಹಾಕಿಸಿ ಆಸ್ತಿ ಕಬಳಿಸಲು ಯತ್ನ : ವಿಡಿಯೋ ವೈರಲ್

ಮೈಸೂರು, ನ.28:- ಆಸ್ತಿ ಕಬಳಿಸಲು ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತನ್ನ ಪಡೆಯುವ ಸನ್ನಿವೇಶಗಳನ್ನು ಸಿನಿಮಾಗಳಲ್ಲಿ ನೋಡಿದ್ದೇವೆ.ಆದರೆ ನಿಜ ಜೀವನದಲ್ಲೂ ಅಂತಹ ಒಂದು ಪ್ರಕರಣ ನಡೆದಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ ಎನ್ನಲಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವೃದ್ದೆಯೊಬ್ಬರು ಮೃತಪಟ್ಟಿದ್ದು, ಈ ವೇಳೆ ಆಕೆಯ ಸಂಬಂಧಿಕರು ಖಾಲಿ ಪತ್ರಗಳಿಗೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದಾರೆ.

ಈ ಸನ್ನಿವೇಶವನ್ನು ಮಹಿಳೆಯೊಬ್ಬರು ಪ್ರಶ್ನಿಸುತ್ತಾ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಹೆಬ್ಬೆಟ್ಟಿನ ಗುರುತಿರುವ ಪತ್ರಗಳನ್ನು ಪಡೆಯಲು ಮಹಿಳೆ ಯತ್ನಿಸಿದ್ದಾರೆ.ಆದರೆ ಇದಕ್ಕೆ ಸ್ಪಂದಿಸದ ಸಂಬಂಧಿಕರು ಖಾಲಿ ಪತ್ರಗಳನ್ನ ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತು ಪಡೆಯುವುದು ಕಾನೂನಿಗೆ ವಿರೋಧ.ಕೂಡಲೇ ಪೊಲೀಸರು ಎಚ್ಚೆತ್ತು ತೆನಿಖೆ ನಡೆಸುವುದು ಸೂಕ್ತ ಎಂಬ ಮಾತು ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: