ಮೈಸೂರು

ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ಜಿ.ಟಿ.ದೇವೇಗೌಡ-ಸಿದ್ದರಾಮಯ್ಯ

ಮೈಸೂರು, ನ.29:- ಮೈಸೂರಿನಲ್ಲಿ  ಶಾಸಕ ಜಿ.ಟಿ.ದೇವೇಗೌಡ ಮತ್ತು  ಸಿದ್ದರಾಮಯ್ಯ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಒಟ್ಟಿಗೆ ದೇವರ ಪೂಜೆಯಲ್ಲಿ  ಇಬ್ಬರೂ ಪಾಲ್ಗೊಂಡಿದ್ದರು. ಮೈಸೂರು ತಾಲ್ಲೂಕು ದಡದ ಕಲ್ಲಹಳ್ಳಿಯಲ್ಲಿ ಗ್ರಾಮದಲ್ಲಿ  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೊನೆಯ ಕಾರ್ತಿಕ ಸೋಮವಾರದ ಪೂಜೆ ನೆರವೇರಿದೆ. ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೆರವೇರಿದೆ. ಪ್ರತಿ ವರ್ಷ ಶಾಸಕ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಪೂಜೆ ನಡೆಯುತ್ತಿತ್ತು. ಈ ಬಾರಿ ಪೂಜೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದರು. ಶ್ರೀ ವೆಂಕಟರಮಣಸ್ವಾಮಿ ವಿಭವಮೂರ್ತಿ ಸ್ವಾಮಿ ದೇವಸ್ಥಾನದ ವತಿಯಿಂದ ಕಲ್ಯಾಣ ಮಹೋತ್ಸವ ನಡೆಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: