ಮೈಸೂರು

ಬೃಂದಾವನ ಬಡಾವಣೆ ಮಹಾಗಣಪತಿ ದೇವಸ್ಥಾನದಲ್ಲಿ ಸಂಭ್ರಮದ ದೀಪೋತ್ಸವ

ಮೈಸೂರು,ನ.30:- ಕೊನೆಯ  ಕಾರ್ತಿಕ ಸೋಮವಾರ  ಪ್ರಯುಕ್ತ  ಬೃಂದಾವನ ಬಡಾವಣೆ ಮಹಾಗಣಪತಿ ದೇವಸ್ಥಾನದಲ್ಲಿ ದೀಪೋತ್ಸವ ಜರುಗಿತು.

ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ದೇವಾಲಯಗಳಲ್ಲಿ ದೀಪೋತ್ಸವ ಅದ್ಧೂರಿಯಿಂದ ನೆರವೇರಿದೆ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಭಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ. ದೇವಾಲಯ ಒಳ ಹಾಗೂ ಹೊರ ಆವರಣದಲ್ಲಿ ದೀಪಗಳನ್ನ ಬೆಳಗಿಸಿದ ಭಕ್ತರು ಪೂಜಾ ಕೈಂಕರ್ಯಗಳಲ್ಲಿ ಮಿಂದೆದ್ದಿದ್ದಾರೆ.ವಿವಿಧ ಆಕಾರಗಳಲ್ಲಿ ದೀಪಗಳನ್ನು ಹಚ್ಚಿ ಸಡಗರ ಸಂಭ್ರಮದಿಂದ ಭಕ್ತರು ಪಾಲ್ಗೊಂಡಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: