ಮೈಸೂರು

ಮೈಸೂರು ಜಿಲ್ಲೆಯಲ್ಲಿ 15ಮಂದಿಯಲ್ಲಿ ಕೊರೋನಾ ಸೋಂಕು ದೃಢ

ಮೈಸೂರು,ನ.30 :- ಮೈಸೂರು ಜಿಲ್ಲೆಯಲ್ಲಿ ನಿನ್ನೆ 15 ಕೊರೊನಾ ಪ್ರಕರಣಗಳು ಧೃಡಪಟ್ಟಿದ್ದು, 28 ಮಂದಿ ಗುಣಮುಖರಾಗಿದ್ದಾರೆ.
17 ವರ್ಷದೊಳಗಿನವರೊಬ್ಬರು, ಇತರರ ಸಂಪರ್ಕದಿಂದ 11, ಉಸಿರಾಟದ ತೊಂದರೆಯಿಂದ 3 ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣಗಳು ಪತ್ತೆಯಾಗಿವೆ. ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 1,79,743 ಪ್ರಕರಣಗಳು ಪತ್ತೆಯಾಗಿದ್ದು, 1,77,077 ಮಂದಿ ಗುಣಮುಖರಾಗಿದ್ದಾರೆ.
ಇಂದು 1,414 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ 237 ಸಕ್ರಿಯ ಪ್ರಕರಣಗಳಿವೆ, ಕೆ.ಆರ್ ನಗರ 1, ಮೈಸೂರು ನಗರ 14 ಪ್ರಕರಣಗಳು ಪತ್ತೆಯಾಗಿದ್ದು, ಮೈಸೂರು ತಾಲೂಕು ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸೀಪುರ ತಾಲೂಕಿನಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.
ಮೈಸೂರು 15 ಸೇರಿದಂತೆ ರಾಜ್ಯದಲ್ಲಿ ಹಾಸನ 21, ಕೊಡಗು 14, ಚಾಮರಾಜನಗರ 8, ಬಳ್ಳಾರಿ 1, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 131, ಚಿಕ್ಕಮಗಳೂರು 1, ದಕ್ಕಿಣ ಕನ್ನಡ 11, ದಾವಣಗೆರೆ 1, ಧಾರವಾಡ 11, ಹಾಸನ 21, ಕೋಲಾರ 2, ಶಿವಮೊಗ್ಗ 4, ತುಮಕೂರು 23, ಉಡುಪಿ 7, ಉತ್ತರ ಕನ್ನಡ 5 ಪ್ರಕರಣ ಸೇರಿದಂತೆ ಒಟ್ಟು 257 ಪ್ರಕರಣ ಪತ್ತೆಯಾಗಿದ್ದು, 205 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಇಲ್ಲಿ ತನಕ 29,95,857 ಪ್ರಕರಣ ಪತ್ತೆಯಾಗಿದ್ದು, 29,50,747 ಮಂದಿ ಗುಣಮುಖರಾಗಿದ್ದಾರೆ. ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ರಾಮನಗರ, ಗದಗ, ಹಾವೇರಿ, ಕಲಬುರಗಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೀದರ್, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ. ಪ್ರಸ್ತುತ ಮೈಸೂರಿನಲ್ಲಿ ಇದುವರೆಗೆ ಒಟ್ಟು 2,429 ಮಂದಿ ಸಾವನ್ನಪಿದ್ದು, ರಾಜ್ಯದಲ್ಲಿ ಸೋಂಕಿನಿಂದ 5 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 38,203 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ 6,878 ಸಕ್ರಿಯ ಪ್ರಕರಣಗಳಿವೆ. (ಎಸ್.ಎಂ,ಎಸ್.ಎಚ್)

Leave a Reply

comments

Related Articles

error: