ಕರ್ನಾಟಕ

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

ರಾಜ್ಯ(ಬೆಂಗಳೂರು),ನ.30 :- ಜೈಲಿನಲ್ಲಿದ್ದುಕೊಂಡೇ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮಂಗಳವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಖೈದಿಗಳು ಮೊಬೈಲ್ ಬಳಸುತ್ತಿದ್ದು,ಅಲ್ಲಿಂದ ಅಪರಾಧ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದರು. ಮಾದಕ ವಸ್ತುವನ್ನು ಬಳಸುತ್ತಿದ್ದಾರೆಂಬ ಮಾಹಿತಿ ಆಧರಿಸಿ ಸಿಸಿಬಿ ವಿಶೇಷ ತಂಡ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ಕಾರ್ಯ ನಡೆಸಿದೆ.
ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 100 ಜನ ಪೊಲೀಸ ಸಿಬ್ಬಂದಿ ದಾಳಿ ಮಾದಿದ್ದು ಮೊಬೈಲ್ ಗಳು, ಸಿಮ್ ಕಾರ್ಡ್ ಹಾಗೂ ಗಾಂಜಾ ಸೇದುವ ಪೈಪ್ ಗಳು , ಪೆನ್ ಡ್ರೈವ್ ಗಳನ್ನು ಪತ್ತೆಮಾಡಿದ್ದಾರೆ. ದಾಳಿ ಮಾಡಿರುವ ವಿಷಯ ತಿಳಿದ ಕೂಡಲೇ ಜೈಲಾಧಿಕಾರಿಗಳು ಆಗಮಿಸಿದ್ದು ಸಿಸಿಬಿ ಪೊಲೀಸರ ಪರಿಶೀಲನೆ ವೇಳೆ ಉಪಸ್ಥಿತರಿದ್ದರು. ಪ್ರತಿ ಬ್ಯಾರಕ್ ನಲ್ಲಿ ಸರ್ಚ್ ಮಾಡಿ ಹಳೇ ರೌಡಿ ಶೀಟರ್ಸ್ ಗಳನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. (ಕೆ.ಎಸ್,ಎಸ್. ಎಮ್)

Leave a Reply

comments

Related Articles

error: