ಕ್ರೀಡೆದೇಶಪ್ರಮುಖ ಸುದ್ದಿ

ವಿವಾಹ ಬಂಧನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಲ್ ರೌಂಡರ್ ರಾಹುಲ್ ತೆವಾಟಿಯಾ

ದೇಶ(ನವದೆಹಲಿ),ನ.30:-ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆಲ್ ರೌಂಡರ್ ರಾಹುಲ್ ತೆವಾಟಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅವರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದು ಹೆಚ್ಚು ವೈರಲ್ ಆಗುತ್ತಿದೆ. ರಾಹುಲ್ ತೆವಾಟಿಯಾ ಪತ್ನಿಯ ಹೆಸರು ರಿದ್ಧಿ ಪನ್ನು. ಈ ವರ್ಷ ಫೆಬ್ರವರಿಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಕ್ರಿಕೆಟಿಗ ರಾಹುಲ್ ಮತ್ತು ರಿದ್ಧಿ ಮದುವೆಯಲ್ಲಿ ಹಲವು ಕ್ರಿಕೆಟಿಗರು ಪಾಲ್ಗೊಂಡಿದ್ದರು. ಟೀಂ ಇಂಡಿಯಾದ ವಿಕೆಟ್‌ ಕೀಪರ್ ರಿಷಬ್ ಪಂತ್, ನಿತೀಶ್ ರಾಣಾ ಮತ್ತು ಯುಜ್ವೇಂದ್ರ ಚಾಹಲ್ ಅವರಂತಹ ಅನೇಕ ಸ್ಟಾರ್ ಗಳು ಜೋಡಿಯನ್ನು ಅಭಿನಂದಿಸಲು ಆಗಮಿಸಿದ್ದರು. ರಾಹುಲ್ ತೆವಾಟಿಯಾ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಟಗಾರ. ಐಪಿಎಲ್-2020ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಐದು ಎಸೆತಗಳಲ್ಲಿ ಐದು ಸಿಕ್ಸರ್‌ ಗಳನ್ನು ಬಾರಿಸುವ ಮೂಲಕ ಅವರು ಗಮನ ಸೆಳೆದಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: