ಕರ್ನಾಟಕಪ್ರಮುಖ ಸುದ್ದಿ

ಟ್ವಿಟ್ಟರ್ ಸಿಇಒ ಆಗಿ ಭಾರತೀಯ ಪರಾಗ್ ಅಗರವಾಲ್ ನೇಮಕ

ರಾಜ್ಯ(ಬೆಂಗಳೂರು),ನ.30 : – ವಿಶ್ವದ ಟಾಪ್ ಕಂಪನಿಗಳಲ್ಲಿ ಭಾರತೀಯರದ್ದೇ ಪಾರುಪತ್ಯವಾಗಿದ್ದು, ಮತ್ತೊಂದು ದೊಡ್ಡ ಕಂಪನಿ ಮುಖ್ಯಸ್ಥರಾಗಿ ಕೂಡ ಭಾರತೀಯ ವ್ಯಕ್ತಿ ಯೋರ್ವರು ಆಯ್ಕೆಯಾಗಿದ್ದಾರೆ. ಟ್ವಿಟ್ಟರ್ ಸಿಇಒ ಆಗಿ ಭಾರತೀಯ ಮೂಲದ ಅಮೇರಿಕನ್ ಪರಾಗ್ ಅಗರ್ ವಾಲ್ ಅಧಿಕಾರ ಸ್ವೀಕರಿಸಿದ್ದಾರೆ. ಪರಾಗ್ ಅಗರ್ ವಾಲ್ ಟ್ವಿಟರ್ ಸಂಸ್ಥೆಯಲ್ಲಿ 2017 ರಿಂದ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಸಿಇಒ ಸ್ಥಾನ ನೀಡಲಾಗಿದ್ದು, ನಿರ್ದೇಶಕರ ಮಂಡಳಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಪರಾಗ್ ಅಗರ್ ವಾಲ್ ಬಾಂಬೆಯಲ್ಲಿ ಐಐಟಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಬಿ ಟೆಕ್ ಅಧ್ಯಯನ ಮಾಡಿದ್ದು, ಟ್ವಿಟರ್ ಗೆ ಸೇರುವ ಮೊದಲು ಮೈಕ್ರೋಸಾಫ್ಟ್, ಯಾಹೂ ಮತ್ತು ಎಟಿ&ಟಿ ಲ್ಯಾಬ್ಸ್ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಈಗಾಗೇ ಗೂಗಲ್ ಸಿಇಒ ಆಗಿ ಭಾರತೀಯ ಸುಂದರ್ ಪಿಚ್ಚೈ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಕ್ರೋಸಾಫ್ಟ್ ಚುಕ್ಕಾಣಿ ಸತ್ಯಾನಾದೆಲ್ಲಾ ಕೈಯಲ್ಲಿದೆ, ಐಬಿಎಂ ಸಿಇಒ ಆಗಿ ಅರವಿಂದ್ ಕೃಷ್ಣ, ಅಡೋಬ್ ಗೆ ಶಂತನು ನಾರಾಯಣ್ , ವಿಎಂ ವೇರ್ ಸಂಸ್ಥೆಯ ಸಿಇಒ ಆಗಿ ರಘು ನಾರಾಯಣ್ ಕಾರ್ಯ ನಿರ್ವಹಿಸುತ್ತಿದ್ದಾರೆ, ಇದೀಗ ಬಹು ಬೇಡಿಕೆಯ ಟ್ವಿಟರ್ ಗೆ ಪರಾಗ್ ಪ್ರಮೋಷನ್ ನಿಂದ ಭಾರತೀಯ ಪಾರಮ್ಯ ಹೆಚ್ಚಿದೆ. ಜಗತ್ತಿನೆಲ್ಲೆಡೆ ಭಾರತೀಯರ ಪ್ರಭಾವ ಹೆಚ್ಚಾಗುತ್ತಿದ್ದು, ಪ್ರಪಂಚದ ಟಾಪ್ ಕಂಪನಿಗಳಲ್ಲಿ ಭಾರತೀಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಇದು ಭಾರತಕ್ಕೆ ಬಹು ಹೆಮ್ಮೆಯ ವಿಚಾರವಾಗಿದೆ. (ಏಜೆನ್ಸಿಸ್, ಎಸ್.ಎಂ)

Leave a Reply

comments

Related Articles

error: