ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಜೀವ ಬೆದರಿಕೆ : ಎಫ್ ಐ ಆರ್ ದಾಖಲಿಸಿದ ನಟಿ

ದೇಶ(ಮುಂಬೈ),ನ.30:- ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದು, ನಂತರ ನಟಿ ದೂರು ದಾಖಲಿಸಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಿಸಿದ್ದಾರೆ. ಕಂಗನಾ ರಾಣಾವತ್ ಅದರ ಮಾಹಿತಿ ಮತ್ತು ಎಫ್‌ಐಆರ್ ಪ್ರತಿಯನ್ನು ಸಾಮಾಜಿಕ ಜಾಲತಾನದ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ “ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರನ್ನು ಸ್ಮರಿಸುತ್ತ, ನಾನು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ದೇಶದ್ರೋಹಿಗಳನ್ನು ಮರೆಯುವುದಿಲ್ಲ ಎಂದು ಬರೆದಿದ್ದೇನೆ. ಅಂತಹ ಘಟನೆಯಲ್ಲಿ ದೇಶದ ಆಂತರಿಕ ದ್ರೋಹಿಗಳ ಕೈವಾಡವಿದೆ. ದೇಶದ್ರೋಹಿಗಳು ಹಣದ ದುರಾಸೆಯಲ್ಲಿ ಮತ್ತು ಕೆಲವೊಮ್ಮೆ ಸ್ಥಾನ ಮತ್ತು ಅಧಿಕಾರದ ದುರಾಸೆಯಲ್ಲಿ ಭಾರತಮಾತೆಯನ್ನು ಕಳಂಕಗೊಳಿಸಲು ಒಂದೇ ಒಂದು ಅವಕಾಶವನ್ನು ಬಿಡಲಿಲ್ಲ.ದೇಶದ್ರೋಹಿಗಳು ಪಿತೂರಿ ಮಾಡುವ ಮೂಲಕ ದೇಶ ವಿರೋಧಿ ಶಕ್ತಿಗಳಿಗೆ ಸಹಾಯ ಮಾಡುತ್ತಲೇ ಇದ್ದಾರೆ, ಆಗ ಮಾತ್ರ ಇಂತಹ ಘಟನೆಗಳು ನಡೆಯುತ್ತವೆ” ಎಂದು ಬರೆದುಕೊಂಡಿದ್ದೆ.
ನನ್ನ ಈ ಪೋಸ್ಟ್‌ ನಲ್ಲಿ ನನಗೆ ವಿಚ್ಛಿದ್ರಕಾರಕ ಶಕ್ತಿಗಳಿಂದ ನಿರಂತರ ಬೆದರಿಕೆಗಳು ಬರುತ್ತಿವೆ. ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಅಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ದೇಶದ ವಿರುದ್ಧ ಪಿತೂರಿ ನಡೆಸುವವರ, ಭಯೋತ್ಪಾದಕರ ವಿರುದ್ಧ ಮಾತನಾಡುತ್ತೇನೆ. ಯಾವತ್ತೂ ಮಾತಾಡುತ್ತಲೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: